ಶುಕ್ರವಾರ, ಜನವರಿ 24, 2020
21 °C

ಸೂರಿಯಣ್ಣ ಹೇಳಿದ ಸಲಗದ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅದು ‘ಸಲಗ’ ಚಿತ್ರದ ಹಾಡು ಬಿಡುಗಡೆಯ ಸಮಾರಂಭ. ಚರಣ್‌ ರಾಜ್‌ ಸಂಗೀತ ಸಂಯೋಜನೆಯ ‘ಸೂರಿಯಣ್ಣ...’ ಹಾಡಿನ ಬಿಡುಗಡೆಗೆ ನಟ ಶಿವರಾಜ್‌ಕುಮಾರ್‌ ಆಗಮಿಸಿದ್ದರು. 

‘ಸಲಗ ಚಿತ್ರತಂಡವನ್ನು ನೋಡಿದರೆ ನನಗೆ ‘ಟಗರು’ ಚಿತ್ರ ನೆನಪಿಗೆ ಬರುತ್ತದೆ. ಚರಣ್‍ ರಾಜ್ ದೇಶದ ಉತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಏನೇ ಕೊಟ್ಟರೂ ಅದಕ್ಕೆ ಉತ್ತಮ ಸಂಗೀತ ನೀಡಿ ಜನರಿಗೆ ತಲುಪಿಸುವ ಸಾಮರ್ಥ್ಯ ಅವರಲ್ಲಿದೆ’ ಎಂದು ಹೊಗಳಿದರು ಶಿವರಾಜ್‌ಕುಮಾರ್.

‘ದುನಿಯಾ ವಿಜಯ್‌ ಅವರು ನಟನೆಯ ಜೊತೆಗೆ ನಿರ್ದೇಶನಕ್ಕೂ ಇಳಿದಿರುವುದು ಸಂತಸ ತಂದಿದೆ. ನಾನು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹಾಗಾಗಿ, ನನಗೆ ನಿರ್ದೇಶನ ಮಾಡಲು ಆಗುವುದಿಲ್ಲ. ಇನ್ನೂ ಎರಡೂವರೆ ದಶಕಗಳ ಕಾಲ ಹೀಗೆಯೇ ಇರುತ್ತೇನೆ’ ಎಂದು ನಕ್ಕರು.

‘ಕೆ.ಪಿ. ಶ್ರೀಕಾಂತ್ ನಮ್ಮ ಕುಟುಂಬದಲ್ಲಿ ಇದ್ದಾರೆ. ಫ್ಯಾಮಿಲಿ ಎಂದಾಗ ಮನಸ್ತಾಪ ಸಹಜ. ಇದು ಇದ್ದಾಗಲೇ ಅದಕ್ಕೊಂದು ಬೆಲೆ ಇರುತ್ತದೆ’ ಎಂದರು.

‘ಸಲಗ’ ಚಿತ್ರದಲ್ಲಿ ಭೂಗತಲೋಕದ ಸುತ್ತ ಕಥೆ ಹೊಸೆಯಲಾಗಿದೆ. ಅಮಾಯಕ ಕ್ರಿಮಿನಲ್‌ ಒಬ್ಬನ ಕಥೆ ಇದು. ದುನಿಯಾ ವಿಜಯ್, ನಾಯಕಿ ಸಂಜನಾ ಆನಂದ್, ಚರಣ್‍ ರಾಜ್, ಧನಂಜಯ್, ಅಚ್ಯುತಕುಮಾರ್‌ ಅನುಭವ ಹಂಚಿಕೊಂಡರು. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ದುನಿಯಾ ವಿಜಯ್ -ಕಿರಣ್ ಸಾಹಿತ್ಯದ ಗೀತೆಗೆ ತಮಿಳಿನ ಆಂಥೋಣಿ ದಾಸ್ ಧ್ವನಿಯಾಗಿದ್ದಾರೆ. ಶೀಘ್ರವೇ, ಉಳಿದ ನಾಲ್ಕು ಹಾಡುಗಳು ಬಿಡುಗಡೆಯಾಗಲಿವೆ.


ದುನಿಯಾ ವಿಜ‌ಯ್‌, ಧನಂಜಯ್, ಚರಣ್‌ ರಾಜ್, ಶಿವರಾಜ್‌ಕುಮಾರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು