ಬೆಂಗಳೂರು: ರಾಜಮೌಳಿ ನಿರ್ದೇಶನದ ಚಿತ್ರ ‘ಆರ್‌ಆರ್‌ಆರ್‘ ದೇಶದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಲಿವುಡ್ ಮಂದಿಯಿಂದ ಪ್ರಶಂಸೆ ಗಳಿಸುತ್ತಿದೆ.
ನಟ ಸಲ್ಮಾನ್ ಖಾನ್ ಅವರು ಕೂಡ ಆರ್‌ಆರ್‌ಆರ್ ಚಿತ್ರವನ್ನು ಮೆಚ್ಚಿಕೊಂಡಿದ್ದು, ರಾಮ್ ಚರಣ್ ಅವರು ಪಾತ್ರವನ್ನು ನಿರ್ವಹಿಸಿರುವ ರೀತಿ ಅದ್ಭುತ ಎಂದಿದ್ದಾರೆ.
ಐಐಎಫ್‌ಎ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಸಲ್ಲೂ ಬಾಯ್, ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ಅವರ ಸಿನಿಮಾ ಆರ್‌ಆರ್‌ಆರ್, ಬಾಲಿವುಡ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ನಮ್ಮ ಸಿನಿಮಾಗಳೇಕೆ ದಕ್ಷಿಣ ಭಾರತದಲ್ಲಿ ಯಶ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ದಬಾಂಗ್ ಸರಣಿಯನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಿದಾಗಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಂಟೆಡ್ ಕೂಡ ದಕ್ಷಿಣದಲ್ಲಿ ಉತ್ತಮ ಗಳಿಕೆ ಕಂಡಿತು. ಆದರೆ ಬಾಲಿವುಡ್‌ನಲ್ಲಿ ನಮ್ಮ ಪ್ರಯತ್ನ ಸಾಲುತ್ತಿಲ್ಲ ಎಂದೆನಿಸುತ್ತಿದೆ ಎಂದು ಸಲ್ಮಾನ್ ಹೇಳಿರುವುದನ್ನು ಬಾಲಿವುಡ್‌ಲೈಫ್.ಕಾಂ ವರದಿ ಮಾಡಿದೆ.