ಖಾನ್‌ತ್ರಯರ ರಹಸ್ಯ ಭೇಟಿ

ಬುಧವಾರ, ಜೂನ್ 19, 2019
28 °C
Salman Khan, Shah Rukh Khan, Aamir Khan

ಖಾನ್‌ತ್ರಯರ ರಹಸ್ಯ ಭೇಟಿ

Published:
Updated:
Prajavani

ಬಾಲಿವುಡ್‌ನ ಖ್ಯಾತ ನಟರಾದ ಸಲ್ಮಾನ್ ಖಾನ್, ಶಾರುಕ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ಸೇರಿದರೆ ಏನಾಗಬಹುದು? ಅಬ್ಬಬ್ಬಾ ಅಂದ್ರೆ ಒಂದು ಸೂಪರ್ ಹಿಟ್ ಸಿನಿಮಾ ತಯಾರಾಗಬಹುದು ಅನ್ನೋದು ಬಹುತೇಕರ ಉತ್ತರ. ಇದುವರೆಗೂ ಖಾನ್‌ತ್ರಯರು
ಒಟ್ಟಾಗಿ ಒಂದೇ ಸಿನಿಮಾದಲ್ಲಿ ಅಭಿನಯಿಸುವ ಕಾಲ ಕೂಡಿ ಬಂದಿಲ್ಲವಾದರೂ (ಈ ಮೂವರನ್ನೂ ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರ ಜೇಬು ಗಟ್ಟಿಯಾಗಿರಬೇಕಷ್ಟೇ!) ಆದರೆ, ಅವರೆಲ್ಲರೂ ಒಟ್ಟಿಗೆ ಸೇರುವುದು ಅಪರೂಪವೇನಲ್ಲ!. 

 –ಹೌದು ಮೂವರೂ ಮಾಧ್ಯಮಗಳ ಕಣ್ತಪ್ಪಿಸಿ ಆಗಾಗ ಗುಟ್ಟಾಗಿ ಒಟ್ಟಿಗೆ ಸೇರ್ತಾ ಇರ್ತಾರೆ. ಮೂವರೂ ಮುಂಬೈನಲ್ಲಿದ್ದರೆ, ಆಗಾಗ ಶಾರುಕ್ ಖಾನ್ ಅವರ ‘ಮನ್ನತ್’ ಬಂಗಲೆಯ ಮಹಡಿಯ ಮೇಲೆ ಸೇರಿ ತಡರಾತ್ರಿಯವರೆಗೂ ಹರಟೆ ಹೊಡೆಯುವುದು ಗ್ಯಾರಂಟಿ. ಎಷ್ಟೇ ಬಿಡುವಿಲ್ಲದ ಶೆಡ್ಯೂಲ್ ಇದ್ದರೂ, ಮೂವರು ಗುಟ್ಟಾಗಿ ಸೇರುವುದನ್ನು ತಪ್ಪಿಸುವುದಿಲ್ಲ. 

ಸಲ್ಮಾನ್ ಮತ್ತು ಅಮೀರ್ ಮನೆ ಶಾರುಕ್ ಮನೆಯ ಹತ್ತಿರವೇ ಇದೆ. ಸಲ್ಮಾನ್ ಖಾನ್ ಮಾಧ್ಯಮದವರ ಕಣ್ತಪ್ಪಿಸಿ ತಮ್ಮ ಡ್ರೈವರ್ ಜೊತೆಗೆ ಒಬ್ಬರೇ ಸದ್ದಿಲ್ಲದೇ ಶಾರುಕ್ ಮನೆಗೆ ಹೊರಟುಬಿಡುತ್ತಾರೆ. ಅಮೀರ್ ಅಂತೂ ಯಾರ ಜತೆಗೂ ಬರದೇ ಏಕಾಂಗಿಯಾಗಿಯೇ ಕಾರ್ ಡ್ರೈವ್ ಮಾಡಿಕೊಂಡು ಶಾರುಕ್ ಅವರ ‘ಅಡ್ಡಾ’ದಲ್ಲಿ ಸೇರಿಬಿಡುತ್ತಾರೆ. ರಾತ್ರಿ ಸದ್ದಿಲ್ಲದೇ ಶುರುವಾಗುವ ಈ ಮೂವರು ಗೆಳೆಯರ ಮಾತುಕತೆ ಸಿನಿಮಾ ಸೇರಿದಂತೆ ಅಂದಿನ ಮುಖ್ಯ ವಿದ್ಯಮಾನದತ್ತ ಗಿರಕಿ ಹೊಡೆಯುತ್ತಾ, ಬೆಳಗಿನ ಜಾವದ ತನಕ ಮಾತುಕತೆ ನಡೆಯುತ್ತಿರುತ್ತದೆ.

ಗೆಳೆಯರ ಮಾತುಕತೆಗೆ ಶಾರುಕ್ ಮನೆಯನ್ನೇ ಆರಿಸಿಕೊಳ್ಳಲು ಕಾರಣವೂ ಇದೆ. ಹೋಟೆಲ್ ಅಥವಾ ಇತರ ಸ್ಥಳಗಳಾದರೆ ಅಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮದವರ ಕಣ್ತಪ್ಪಿಸಲಾಗದು. ಮನೆಯಂತೆ ಅಲ್ಲಿ ಮುಕ್ತವಾಗಿ ಮಾತನಾಡಲೂ ಆಗದು. ಹಾಗಾಗಿ, ಶಾರುಕ್ ಮನೆಯ ಮಹಡಿಯೇ ಮಾತುಕತೆಯ ಸ್ಥಳವಾಗಿದೆ. ಸ್ನೇಹಿತರ ಮಾತುಕತೆಯಲ್ಲಿ ಬಾಲಿವುಡ್‌ನ ಬೆಳವಣಿಗೆ, ಹೊಸ ನಟ–ನಟಿಯರ ಪ್ರತಿಭೆ, ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆಯೂ ನಡೆಯುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !