ಶನಿವಾರ, ಜನವರಿ 22, 2022
16 °C

'ಅಂತಿಮ್‌': ಚಿತ್ರಮಂದಿರದೊಳಗೇ ಪಟಾಕಿ ಸಿಡಿಸಿದ ಸಲ್ಮಾನ್‌ ಖಾನ್‌ ಅಭಿಮಾನಿಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಟ ಸಲ್ಮಾನ್‌ ಖಾನ್‌ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಅಂತಿಮ್: ದಿ ಫೈನಲ್‌ ಟ್ರುತ್‌' ಪ್ರದರ್ಶನದ ವೇಳೆ ಅಭಿಮಾನಿಗಳು ಚಿತ್ರಮಂದಿರದೊಳಗೇ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಹುಚ್ಚು ಅಭಿಮಾನಿಗಳ ಕೃತ್ಯವನ್ನು ಸಲ್ಮಾನ್‌ ಖಾನ್‌ ವಿರೋಧಿಸಿದ್ದು, ಚಿತ್ರಮಂದಿರದೊಳಗೆ ಪಟಾಕಿಗಳನ್ನು ಸಿಡಿಸಿದಂತೆ ಮನವಿ ಮಾಡಿದ್ದಾರೆ.

ಚಿತ್ರಮಂದಿರದ ಒಳಗೆ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸಂಭ್ರಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್‌, 'ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಬೇಡಿ ಎಂದು ನನ್ನ ಎಲ್ಲ ಅಭಿಮಾನಿಗಳಲ್ಲಿ ಕೋರಿಕೊಳ್ಳುತ್ತಿದ್ದೇನೆ. ಇದರಿಂದ ಅಗ್ನಿ ಅನಾಹುತವಾಗುವ ಸಂಭವವಿದೆ. ನಿಮ್ಮ ಜೀವನ್ನು ಮಾತ್ರವಲ್ಲ ಬೇರೆಯವರ ಜೀವವನ್ನು ಅಪಾಯಕ್ಕೆ ಸಿಕ್ಕಿಸಿದಂತಾಗುತ್ತದೆ. ಸಿನಿಮಾ ಪ್ರದರ್ಶನ ನಡೆಯುವ ಪ್ರದೇಶದಲ್ಲಿ ಪಟಾಕಿ ಸಿಡಿಸಲು ಅವಕಾಶ ಮಾಡಿಕೊಡಬಾರದು ಎಂದು ಚಿತ್ರಮಂದಿರದ ಮಾಲೀಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಪಟಾಕಿಗಳನ್ನು ಒಳಗೆ ತರುವುದನ್ನು ಭದ್ರತಾ ಸಿಬ್ಬಂದಿ ತಡೆಯಬೇಕು.' ಎಂದು ವಿನಂತಿಸಿದ್ದಾರೆ.

ಮಹೇಶ್‌ ಮಂಜ್ರೇಕರ್‌ ನಿರ್ದೇಶನವಿರುವ 'ಅಂತಿಮ್‌' ಚಿತ್ರದಲ್ಲಿ ಮಹಿಮಾ ಮಕವಾನಾ, ಆಯುಷ್‌ ಶರ್ಮಾ, ಪ್ರಗ್ಯಾ ಜೈಸ್ವಾಲ್‌ ಮುಂತಾದವರು ಅಭಿನಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು