ಬುಧವಾರ, ಆಗಸ್ಟ್ 10, 2022
20 °C

ಮಾಜಿ ಗರ್ಲ್‌ಫ್ರೆಂಡ್‌ ಕತ್ರಿನಾಗೆ ಜನ್ಮದಿನದ ಶುಭಾಶಯ ಕೋರಿದ ಸಲ್ಮಾನ್‌ ಖಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: 38ನೇ ವರ್ಷಕ್ಕೆ ಕಾಲಿಟ್ಟ ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್‌ಗೆ ಸಲ್ಮಾನ್‌ ಖಾನ್‌ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಕಪಿಲ್‌ ಶರ್ಮಾ ಶೋನಲ್ಲಿ ಕತ್ರಿನಾ ಕೈಫ್‌ರೊಂದಿಗೆ ಭಾಗವಹಿಸಿದ್ದ ಚಿತ್ರವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಲ್ಲೂ ಬಾಯ್‌ ಹಂಚಿಕೊಂಡಿದ್ದಾರೆ.

'ಕತ್ರಿನಾಗೆ ಜನ್ಮದಿನದ ಶುಭಾಶಯಗಳು. ಆರೋಗ್ಯಕರ, ಸಂಪದ್ಭರಿತ ಜನ್ಮದಿನಗಳು ನಿನ್ನ ಬದುಕಲ್ಲಿ ಮತ್ತೆ ಮರುಕಳಿಸಲಿ. ಪ್ರೀತಿ ಮತ್ತು ಗೌರವದಿಂದ ಕೂಡಿದ ಹಾರೈಕೆಗಳಿರಲಿ' ಎಂದು ಸಲ್ಮಾನ್‌ ಖಾನ್‌ ಬರೆದುಕೊಂಡಿದ್ದಾರೆ.

ಮೈನೆ ಪ್ಯಾರ್ ಕ್ಯು ಕಿಯಾ, ಪಾರ್ಟ್ನರ್‌, ಏಕ್ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸೇರಿದಂತೆ ಹಲವು ಚಿತ್ರಗಳಲ್ಲಿ ಸಲ್ಮಾನ್ ಮತ್ತು ಕತ್ರಿನಾ ಒಟ್ಟಿಗೆ ನಟಿಸಿದ್ದಾರೆ.

ಶುಕ್ರವಾರ ಜನ್ಮದಿನ ಆಚರಿಸಿಕೊಂಡಿರುವ ಕತ್ರಿನಾ ಕೈಫ್‌ಗೆ ಸಹಸ್ರ ಸಹಸ್ರ ಅಭಿಮಾನಿಗಳಷ್ಟೇ ಅಲ್ಲ, ಬಾಲಿವುಡ್‌ನ ಸೆಲೆಬ್ರಿಟಿಗಳೂ ಶುಭಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು