ಸೋಮವಾರ, ಮಾರ್ಚ್ 27, 2023
32 °C

‘ಅಶ್ವತ್ಥಾಮ’ನ ಬೆನ್ನಿಗೆ ನಿಂತ ಸಮಂತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗು ಸಿನಿರಂಗದ ಸುಂದರಾಂಗ ನಾಗಶೌರ್ಯ ‘ಕ್ರಿಕೆಟ್ ಗರ್ಲ್ಸ್ ಅಂಡ್ ಬಿಯರ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದವರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ ‘ಚಲೋ’ ಸಿನಿಮಾ. ಈಗ ’ಅಶ್ವತ್ಥಾಮ’ ಸಿನಿಮಾದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ ನಾಗಶೌರ್ಯ. ಈ ಚಿತ್ರವೂ 2020ರ ಜನವರಿ 31ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಸಾಯಿ ಚರಣ್ ಪಕಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಸಿನಿಮಾದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಆದರೆ ‘ಚಲೋ’ ಸಿನಿಮಾದ ಹಾಡು ವೈರಲ್ ಆದಂತೆ ಈ ಸಿನಿಮಾದ ಹಾಡು ವೈರಲ್ ಆಗಿಲ್ಲ. 

ಈ ಎಲ್ಲ ಸುದ್ದಿಯ ನಡುವೆ ಸಮಂತಾ ಈ ಚಿತ್ರದ ಪ್ರಮೋಶನ್‌ಗೆ ಸಹಾಯ ಮಾಡುತ್ತಿರುವುದು ಈಗೀನ ಸುದ್ದಿ. ಸಿನಿಮಾದ 20 ನಿಮಿಷಗಳ ಕತೆ ಕೇಳಿ ಟೀಸರ್ ಬಿಡುಗಡೆ ಮಾಡಲು ಸಮಂತಾ ಖುಷಿಯಿಂದ ಒಪ್ಪಿಕೊಂಡಿದ್ದರು. ಸಮಂತಾ ಹಾಗೂ ನಾಗಶೌರ್ಯ ‘ಓ ಬೇಬಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.

ಈ ಚಿತ್ರವು ಮಹಿಳಾ ಸಮಾನತೆ ಹಾಗೂ ಮಹಿಳಾ ಸುರಕ್ಷತೆಯ ಕತೆಯನ್ನು ಹೊಂದಿದ್ದು ಕಥೆ ಸಮಂತಾಗೆ ತುಂಬಾ ಇಷ್ಟವಾಗಿತ್ತು. ಅಲ್ಲದೇ ಸಿನಿಮಾ ಕತೆ ಕೇಳಿದ ಮೇಲೆ ನಾಗಶೌರ್ಯ ಅವರನ್ನು ಹೊಗಳಿದ್ದಾರೆ ಸ್ಯಾಮ್‌. ಈ ಚಿತ್ರಕ್ಕೆ ಸ್ವತಃ ನಾಗಶೌರ್ಯ ಚಿತ್ರಕತೆ ಬರೆದಿದ್ದು, ರಮಣ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಮಹೆರಿನ್‌ ಪ್ರಿಝಾಡ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗಶೌರ್ಯ ನಿರ್ಮಾಣ ಸಂಸ್ಥೆ ಐಆರ್‌ಎ ಕ್ರಿಯೇಷನ್‌ ಅಡಿ ಮೂಡಿ ಬರುತ್ತಿರುವ ಮೂರನೇ ಚಿತ್ರವಿದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು