ಬುಧವಾರ, ಏಪ್ರಿಲ್ 1, 2020
19 °C

ನಟಿ ಸಮಂತಾ ಅಕ್ಕಿನೇನಿ ಗರ್ಭಿಣಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಸಮಂತಾ ಅಕ್ಕಿನೇನಿ ಗರ್ಭಿಣಿಯೇ?

ತಮಿಳಿನ ವಿಘ್ನೇಶ್‌ ಶಿವನ್‌ ನಿರ್ದೇಶನದ ಹೊಸ ಚಿತ್ರ ‘ಕಾತುವಾಕುಲ ರೆಂಡು ಕಾದಲ್’ ಚಿತ್ರದಿಂದ ನಟಿ ಸಮಂತಾ ಅಕ್ಕಿನೇನಿ ಹೊರಬಿದ್ದಿರುವುದೇ ಈ ಸುದ್ದಿ ಹಬ್ಬಲು ಮೂಲ ಕಾರಣವಾಗಿದೆ. ನಟ ವಿಜಯ್ ಸೇತುಪತಿ ನಾಯಕರಾಗಿರುವ ಈ ಚಿತ್ರದಲ್ಲಿ ನಯನತಾರಾ ಮತ್ತು ಸಮಂತಾ ನಟಿಸಲಿದ್ದಾರೆ ಎಂದು ಪ್ರೇಮಿಗಳ ದಿನದಂದು ನಿರ್ದೇಶಕರೇ ಘೋಷಿಸಿದ್ದರು. ಒಂದೇ ಸಿನಿಮಾದಲ್ಲಿ ಇಬ್ಬರು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿರುವುದಕ್ಕೆ ಅವರ ಅಭಿಮಾನಿಗಳು ಖುಷಿಯಾಗಿದ್ದರು.

ಆದರೆ, ಸಮಂತಾ ದಿಢೀರನೇ ಈ ಚಿತ್ರದಿಂದ ಹೊರಬಂದಿರುವುದು ಏಕೆ ಎಂಬುದು ಅಧಿಕೃತವಾಗಿಲ್ಲ. ಮೂಲಗಳ ಪ್ರಕಾರ ಸಮಂತಾ ಅವರೇ ಈ ಪ್ರಾಜೆಕ್ಟ್‌ನಿಂದ ಹೊರ ಬಂದಿದ್ದಾರಂತೆ. ಇತ್ತೀಚೆಗೆ ಚೆನ್ನೈನಲ್ಲಿ ವಿಘ್ನೇಶ್‌ ಅವರ ಕಚೇರಿಗೆ ಭೇಟಿ ನೀಡಿದ್ದ ಅವರು, ಹೊಸ ಚಿತ್ರದ ಭಾಗವಾಗದಿರುವುದಕ್ಕೆ ನಿರ್ದೇಶಕರ ಬಳಿ ಕ್ಷಮೆ ಕೋರಿದ್ದಾರೆ. ಜೊತೆಗೆ, ತಾವು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಕೆಲವು ನಟಿಯರ ಹೆಸರನ್ನು ಸಮಂತಾ ಅವರೇ ಸೂಚಿಸಿದ್ದಾರಂತೆ.

ಸಮಂತಾ ಗರ್ಭಿಣಿಯಾಗಿರುವ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿಯಂತೂ ಟಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಜೊತೆಗೆ, ಈ ವರ್ಷ ಅವರು ಯಾವೊಂದು ಸಿನಿಮಾಕ್ಕೂ ಸಹಿ ಹಾಕಿಲ್ಲ. ಅವರು ಗರ್ಭಿಣಿಯಾಗಿರಬಹುದು ಎಂಬುದಕ್ಕೆ ಇದು ಪುಷ್ಟಿ ನೀಡಿದೆ. ಕೌಟುಂಬಿಕ ಬದುಕಿಗೆ ಹೆಚ್ಚಿನ ಒತ್ತು ನೀಡುವುದಕ್ಕಾಗಿ ಸಮಂತಾ ಈ ನಿರ್ಧಾರ ತಳೆದಿರಬಹುದು ಎಂಬುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.

2017ರ ಅಕ್ಟೋಬರ್‌ನಲ್ಲಿ ಆಕೆ ನಟ ನಾಗಚೈತನ್ಯ ಜೊತೆಗೆ ಗೋವಾದಲ್ಲಿ ಸಪ್ತಪದಿ ತುಳಿದಿದ್ದರು. ‘ಸಮಂತಾ ತಾಯ್ತನದ ಸುಖ ಅನುಭವಿಸುವುದು ಯಾವಾಗ?’ ಎಂದು ಕಳೆದ ವರ್ಷ ಆಕೆಯ ಅಭಿಮಾನಿಗಳು ಪ್ರಶ್ನಿಸಿದ್ದರು. 

‘2022ರ ಆಗಸ್ಟ್‌ 7ರಂದು ಬೆಳಿಗ್ಗೆ 7ಗಂಟೆಗೆ ನಾನು ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ‘ರಂಗಸ್ಥಳಂ’ ಖ್ಯಾತಿಯ ಈ ನಾಯಕಿ ದಿನಾಂಕ ಘೋಷಿಸಿ ಎಲ್ಲರನ್ನೂ ಅಚ್ಚರಿಯ ಮಡುವಿಗೆ ದೂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು