ಭಾನುವಾರ, ಮಾರ್ಚ್ 26, 2023
21 °C

ಅಕ್ಕಿನೇನಿ ಹೆಸರು ತೆಗೆದುಹಾಕಿದ ಸಮಂತಾ! ಯಾಕೆ ಅಂತ ತಲೆಕೆಡಿಸಿಕೊಂಡ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳು ಹಾಗೂ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ತಮ್ಮ ಸೋಶಿಯಲ್ ಮೀಡಿಯಾದ ಟ್ವಿಟರ್ ಮತ್ತು ಇನ್ಸ್‌ಸ್ಟಾಗ್ರಾಂನಲ್ಲಿ ಸಮಂತಾ ಅಕ್ಕಿನೇನಿ ಎಂದಿದ್ದ ತಮ್ಮ ಹೆಸರ( Display Name) ಅನ್ನು ’ಎಸ್‌’ (S) ಎಂದು ಬದಲಾಯಿಸಿಕೊಂಡಿರುವುದು ಟಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಮಂತಾ ಹಾಗೂ ಅಕ್ಕಿನೇನಿ ಕುಟುಂಬದ ಅಭಿಮಾನಿಗಳಿಗೆ ಏಕಾಏಕಿ ಹೆಸರು ಬದಲಾಯಿಸಿಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ನಟ ಅಕ್ಕಿನೇನಿ ನಾಗ ಚೈತನ್ಯ ಅವರನ್ನು ಮದುವೆಯಾಗುವುದಕ್ಕೂ ಮುಂಚೆ ಸಮಂತಾ ರುತ್ ಪ್ರಭು ಎಂದು ಹೆಸರನ್ನು ಇಟ್ಟುಕೊಂಡಿದ್ದರು. 2017ರಲ್ಲಿ ಮದುವೆಯಾದ ಬಳಿಕ ತಮ್ಮ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಸಮಂತಾ ಅಕ್ಕಿನೇನಿ ಎಂದೇ ಗುರುತಿಸಿಕೊಂಡಿದ್ದರು. ಆದರೆ ಈಗ ‘ಎಸ್’ ಅಕ್ಷರವನ್ನು ಇಟ್ಟುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಫೇಸ್‌ಬುಕ್‌ನಲ್ಲಿ ಮಾತ್ರ ಸಮಂತಾ ಅಕ್ಕಿನೇನಿ ಎಂದೇ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆರೋಗ್ಯವಾಗಿದ್ದೇನೆ: ವದಂತಿಗಳಿಗೆ ತೆರೆ ಎಳೆದ ನಟಿ ಶಕೀಲಾ

ಸಿನಿಮಾ ನಟ, ನಟಿಯರು ಕೆಲವು ಸಲ ತಾವು ನಟಿಸುತ್ತಿರುವ ಸಿನಿಮಾದ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಸರು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಸಮಂತಾ ಕೂಡ ಈ ಗಿಮಿಕ್‌ ಮಾಡಿರಬಹುದು ಎಂದು ಅಂಬೋಣ. ಸದ್ಯ ಸಮಂತಾ ಶಾಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದು ’ಎಸ್‌’ ಎಂದು ಬದಲಾಯಿಸಿಕೊಂಡಿರಬಹುದು ಎಂಬುದು ಟಾಲಿವುಡ್‌ ಮಂದಿಯ ಲೆಕ್ಕಚಾರ.

ಇದನ್ನೂ ಓದಿ: ಬಾಲಿವುಡ್‌ ನಟಿ ಜಿಯಾ ಖಾನ್‌ ಆತ್ಮಹತ್ಯೆ: ಸಿಬಿಐ ವಿಶೇಷ ನ್ಯಾಯಾಲಯದಿಂದ ವಿಚಾರಣೆ

ಶಾಕುಂತಲಂ ಸೇರಿದಂತೆ ಸಮಂತಾ ಕೈಯಲ್ಲಿ ಸದ್ಯ ಮೂರು ಚಿತ್ರಗಳಿವೆ. ವಿಘ್ನೇಶ್‌ ಶಿವನ್‌ ಹಾಗೂ ಅಶ್ವಿನ್‌ ಸರವಣ್‌ ನಿರ್ದೇಶನದ ಸಿನಿಮಾಗಳಲ್ಲೂ ಸಮಂತಾ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಬಹುಮುಖಿ ನಂದಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು