ಬುಧವಾರ, ಮಾರ್ಚ್ 29, 2023
32 °C

ವಿಚ್ಛೇದನ ಬಳಿಕ ಸಾಮಾಜಿಕ ತಾಣಗಳಲ್ಲಿ ಹೆಸರು ಬದಲಾಯಿಸಿಕೊಂಡ ಸಮಂತಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samantha Ruth Prabhu Instagram Screengrab

ಬೆಂಗಳೂರು: ತೆಲುಗಿನ ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ನಡುವಣ ದಾಂಪತ್ಯ ಕೊನೆಗೊಂಡಿದೆ.

ಅಕ್ಕಿನೇನಿ ಕುಟುಂಬದ ಚೈತನ್ಯ, 2017ರಲ್ಲಿ ಸಮಂತಾ ಅವರನ್ನು ವಿವಾಹವಾಗಿದ್ದರು. ಬಳಿಕ ಅ. 2ರ ಶನಿವಾರ ಇಬ್ಬರೂ ತಮ್ಮ ವಿಚ್ಛೇದನ ಕುರಿತು ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದರು.

ಅದಾದ ಬಳಿಕ ಸಮಂತಾ ರುತ್ ಪ್ರಭು, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಹೆಸರು ಬದಲಾಯಿಸಿಕೊಂಡಿದ್ದಾರೆ.

ಸಮಂತಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 1.9 ಕೋಟಿ ಫಾಲೋವರ್ಸ್ ಇದ್ದಾರೆ.


ಅಧಿಕೃತ ಇನ್‌ಸ್ಟಾಗ್ರಾಂ ಖಾತೆ

ನಾಗ ಚೈತನ್ಯ ಜತೆಗಿದ್ದಾಗ ಸಮಂತಾ ಅವರ ಹೆಸರು ಸಮಂತಾ ಅಕ್ಕಿನೇನಿ ಎಂದು ಖಾತೆ ಹೆಸರು ಹೊಂದಿದ್ದರು. ಬಳಿಕ, ಅಕ್ಕಿನೇನಿ ಸರ್‌ನೇಮ್ ತೆಗೆದುಹಾಕಿ, ಸಮಂತಾ ಎಂದಷ್ಟೇ ಉಳಿಸಿಕೊಂಡಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ದಂಪತಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬಂದಿತ್ತು.

ವಿಚ್ಛೇದನ ಅಧಿಕೃತವಾಗುತ್ತಲೇ, ಸಮಂತಾ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಹೆಸರನ್ನು ಸಮಂತಾ ರುತ್ ಪ್ರಭು ಎಂದು ಬದಲಾಯಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು