ಬುಧವಾರ, ಮಾರ್ಚ್ 29, 2023
30 °C

ಅಫೇರ್, ಅಬಾರ್ಶನ್‌ನ ವದಂತಿಗಳೆಲ್ಲ ಸುಳ್ಳು: ಸಮಂತಾ ಸ್ಪಷ್ಟನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samantha Ruth Prabhu Instagram

ಬೆಂಗಳೂರು: ತೆಲುಗು ನಟ ನಾಗ ಚೈತನ್ಯ ಜತೆಗಿನ ಮದುವೆ ಮುರಿದು ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ ರುತ್ ಪ್ರಭು ತಮ್ಮ ಮೇಲಿನ ಆರೋಪ, ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. 

‘ನನಗೆ ಬೇರೆ ಸಂಬಂಧವಿತ್ತು, ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದೆಲ್ಲ ವದಂತಿ ಹರಡಲಾಗಿತ್ತು. ಆದರೆ ಅವುಗಳೆಲ್ಲ ಸುಳ್ಳು,’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಚ್ಛೇದನದ ಬಳಿಕ ಸಮಂತಾ, ತಮ್ಮ ಸಾಮಾಜಿಕ ತಾಣಗಳ ಹೆಸರನ್ನು ಬದಲಾಯಿಸಿಕೊಂಡಿದ್ದರು. ಹೆಸರಿನ ಕೊನೆಯಲ್ಲಿದ್ದ ಅಕ್ಕಿನೇನಿ ಪದವನ್ನು ತೆಗೆದುಹಾಕಿದ್ದರು.

ನಂತರದಲ್ಲಿ ಕೇಳಿಬಂದಿರುವ ವಿವಿಧ ರೀತಿಯ ವದಂತಿಗಳು, ಗಾಸಿಪ್ ಸುದ್ದಿಗಳಿಗೆ ಉತ್ತರ ನೀಡಿರುವ ನಟಿ ಸಮಂತಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರೀಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನನ್ನ ಜತೆಗಿರುವ ಎಲ್ಲರಿಗೂ ಧನ್ಯವಾದಗಳು, ನನ್ನ ಬಗ್ಗೆ ಹಲವು ಊಹಾಪೋಹಗಳು ಹರಡಿವೆ, ನನಗೆ ಬೇರೆ ಸಂಬಂಧವಿತ್ತು, ನಾನು ಗರ್ಭಪಾತ ಮಾಡಿಸಿಕೊಂಡಿದ್ದೆ, ನನಗೆ ಮಕ್ಕಳು ಬೇಕಿರಲಿಲ್ಲ ಮತ್ತು ನಾನು ಅವಕಾಶವಾದಿಯಾಗಿದ್ದೆ ಎಂದೆಲ್ಲ ಹೇಳಿದ್ದರು. ಆದರೆ ಅವೆಲ್ಲವೂ ನಿಜವಲ್ಲ. ವಿಚ್ಛೇದನದ ನೋವೇ ದೀರ್ಘವಾದದ್ದು. ಅದರ ಜತೆಗೆ ಇಂತಹ ಮಾತುಗಳ ಮೂಲಕ ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ನನ್ನ ಬಗೆಗಿನ ವದಂತಿಗಳೆಲ್ಲವೂ ಸುಳ್ಳು ಎಂದು ಹೇಳುತ್ತಿದ್ದೇನೆ. ಇದರಿಂದ ಹೊರಬರಲು ನನಗೆ ಇನ್ನಷ್ಟು ಸಮಯ ಬೇಕಿದೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.


ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಸ್ಪಷ್ಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು