ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಕ್ರಾಂತ್‌ ರೋಣ’ನಿಗೆ ಕೇರಳದಲ್ಲಿ ದುಲ್ಕರ್‌ ಸಾಥ್‌

Last Updated 14 ಜುಲೈ 2022, 13:28 IST
ಅಕ್ಷರ ಗಾತ್ರ

ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆಯ ಹೊಸ್ತಿಲಲ್ಲಿದೆ. ಜುಲೈ 28ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ದೇಶದಾದ್ಯಂತ ಯಾರು ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ ಎನ್ನುವ ಪಟ್ಟಿ ಇದೀಗ ಹೊರಬಿದ್ದಿದೆ.

ಕನ್ನಡದಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾವನ್ನು ಜೀ ಸ್ಟುಡಿಯೊ ಮತ್ತು ಕಿಚ್ಚ ಕ್ರಿಯೇಷನ್ಸ್‌ ಪ್ರಸ್ತುತಪಡಿಸುತ್ತಿದ್ದು, ಶಾಲಿನಿ ಆರ್ಟ್ಸ್‌ ಮುಖಾಂತರ ನಿರ್ಮಾಪಕ ಜಾಕ್‌ ಮಂಜು ಹಾಗೂ ಶಾಲಿನಿ ಮಂಜುನಾಥ್‌ ಅವರು ವಿತರಣೆ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ, ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರ ಸಲ್ಮಾನ್ ಖಾನ್ ಫಿಲ್ಮ್ಸ್(ಎಸ್‌ಕೆಎಫ್‌) ಈ ಸಿನಿಮಾವನ್ನು ಪ್ರಸ್ತುತಪಡಿಸಲಿದೆ ಎಂದು ಸುದೀಪ್‌ ಈ ಹಿಂದೆಯೇ ಘೋಷಿಸಿದ್ದರು. ಸಿನಿಮಾದ ಹಿಂದಿ ಅವತರಣಿಕೆಯನ್ನು ಪಿವಿಆರ್‌ ಪಿಕ್ಚರ್ಸ್‌ ವಿತರಣೆ ಮಾಡಲಿದೆ. ಇದು ಎಸ್‌ಕೆಎಫ್‌ ಪ್ರಸ್ತುತಪಡಿಸುತ್ತಿರುವ ಮೊದಲ ಸಿನಿಮಾ ಎನ್ನುತ್ತಾರೆ ನಿರ್ಮಾಪಕ ಜಾಕ್‌ ಮಂಜು.

ಉಳಿದ ರಾಜ್ಯಗಳಲ್ಲಿ ಚಿತ್ರದ ವಿತರಣೆ ಹಕ್ಕನ್ನು ಯಾರು ಪಡೆಯಲಿದ್ದಾರೆ ಎನ್ನುವುದು ಪ್ರಶ್ನೆಯಾಗಿ ಉಳಿದಿತ್ತು. ಇದಕ್ಕೀಗ ಉತ್ತರ ದೊರಕಿದ್ದು, ಕೇರಳದಲ್ಲಿ ವಿತರಣೆ ಹಕ್ಕನ್ನು ಖ್ಯಾತ ನಟ ದುಲ್ಕರ್‌ ಸಲ್ಮಾನ್‌ ಪಡೆದಿದ್ದಾರೆ. ತಮ್ಮ ವೇಫರರ್‌ ಫಿಲ್ಮ್ಸ್‌ ಡಿಸ್ಟ್ರಿಬ್ಯೂಷನ್ಸ್‌ನಡಿ ಮಲಯಾಳಂನಲ್ಲಿ ಡಬ್‌ ಆಗಿರುವ ಸಿನಿಮಾದ ಅವತರಣಿಕೆಯನ್ನುದುಲ್ಕರ್‌ ವಿತರಣೆ ಮಾಡಲಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಎಫ್‌ಸಿ ಡಿಸ್ಟ್ರಿಬ್ಯೂಟರ್ಸ್‌ ಮೂಲಕ ಕಾಸ್ಮೋಸ್‌ ಎಂಟರ್‌ಟೈನ್‌ಮೆಂಟ್ಸ್‌ ಈ ಸಿನಿಮಾವನ್ನು ವಿತರಣೆ ಮಾಡಲಿದೆ. ತಮಿಳಿನಾಡಿನಲ್ಲಿ ವಿತರಣೆಹಕ್ಕನ್ನುಜೀಸ್ಟುಡಿಯೋಪಡೆದುಕೊಂಡಿದೆ. ವಿದೇಶಗಳಲ್ಲಿ ‘ವಿಕ್ರಾಂತ್‌ ರೋಣ’ ವಿತರಣೆ ಹಕ್ಕನ್ನು ‘One Twenty 8 Media’ ಪಡೆದುಕೊಂಡಿದೆ.

ವಿಶ್ವದಾದ್ಯಂತ 1200ಕ್ಕೂ ಅಧಿಕ ಪರದೆಗಳಲ್ಲಿ ‘ವಿಕ್ರಾಂತ್‌ ರೋಣ’ 3ಡಿಯಲ್ಲಿ ತೆರೆಕಾಣಲಿದೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಹಿಂದಿ, ಮಲಯಾಳಂ, ತೆಲುಗು, ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ಡಬ್‌ ಆಗಿದೆ. ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT