ಮಂಗಳವಾರ, ಜನವರಿ 25, 2022
28 °C

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ, ಶುಭಾ ಪೂಂಜಾ ಸದ್ದಿಲ್ಲದೇ, ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಶುಭಾ ಅವರ ವಿವಾಹ ಉಡುಪಿ ಸಮೀಪದ ಮಜಲಬೆಟ್ಟುಬೀಡುವಿನಲ್ಲಿ ಬುಧವಾರ ನಡೆದಿದೆ. 

ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಮದುವೆಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶುಭಾ ಅವರು ಹಂಚಿಕೊಂಡಿದ್ದಾರೆ. ‘ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’ ಎಂದಿದ್ದಾರೆ.

ಬಿಗ್‌ಬಾಸ್‌ ವಿಜೇತ ಮಂಜು ಪಾವಗಡ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದ್ದಾರೆ. ಬಿಗ್‌ಬಾಸ್‌ ರಿಯಾಲಿಟಿ ಶೋ ಮನೆಯಲ್ಲಿ ಮಾತಿನಲ್ಲೇ ಒಬ್ಬರೊಬ್ಬರ ಕಾಲೆಳೆದುಕೊಂಡು ಮಂಜು ಹಾಗೂ ಶುಭಾ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ‘ಮಂಜಣ್ಣ’, ‘ಗುಂಡಮ್ಮ’ ಜೋಡಿ ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆದಿತ್ತು. ಬಿಗ್‌ಬಾಸ್‌ ಬಳಿಕ ಸಿನಿಮಾದಲ್ಲೂ ಶುಭಾ ಸಕ್ರಿಯರಾಗಿದ್ದಾರೆ. ಗ್ಲ್ಯಾಮರಸ್‌ ಹಾಗೂ ಬಬ್ಲಿಬಬ್ಲಿಯಾದ ಪಾತ್ರಗಳನ್ನೇ ಕಾಣಿಸಿಕೊಳ್ಳುತ್ತಿದ್ದ ಶುಭಾ, ‘ತ್ರಿದೇವಿ’ ಚಿತ್ರಕ್ಕಾಗಿ ಕಳರಿಪಯಟ್ಟು ಕಲಿತು ಆ್ಯಕ್ಷನ್‌ ಚಿತ್ರಗಳಿಗೂ ಸೈ ಎನಿಸಿಕೊಂಡಿದ್ದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು