ಡ್ರಗ್ ಮಾಫಿಯಾ: ಮನೆಯಲ್ಲೇ ನಟಿ ರಾಗಿಣಿ ವಿಚಾರಣೆ, ವಶಕ್ಕೆ ಪಡೆಯುವ ಸಾಧ್ಯತೆ

ಬೆಂಗಳೂರು: ಡ್ರಗ್ ಮಾಫಿಯಾ ಸಂಬಂಧ ನಟಿ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮನೆಯಲ್ಲೇ ರಾಗಿಣಿ ಇದ್ದು, ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪುರಾವೆಗಳು ಸಿಕ್ಕರೆ ಅವರನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.
ಆರಂಭದಲ್ಲಿ ರಾಗಿಣಿ ಅವರು ಫ್ಲ್ಯಾಟ್‌ನಲ್ಲಿ ಇಲ್ಲವೆಂದು ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು ಹೇಳಿದ್ದರು. ಮನೆಯೊಳಗೆ ಸಿಸಿಬಿ ಪೊಲೀಸರು ಹೋದಾಗ ರಾಗಿಣಿ ಇರುವುದು ಗೊತ್ತಾಗಿದೆ.
ದಾಳಿ ನಂತರ ರಾಗಿಣಿ ಅವರೇ ಮನೆಯಿಂದ ಹೊರಬಂದು ಕ್ಯಾಮೆರಾದತ್ತ ಮುಖಮಾಡಿ ಕೈ ಬೀಸಿದರು.
ಸಿಸಿಬಿ ಸಿಬ್ಬಂದಿ, ಮನೆಯಲ್ಲಿದ್ದ ಬಟ್ಟೆ ಹಾಗೂ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ತಪಾಸಣೆ ಮುಂದುವರಿದಿದೆ.
ಸ್ನೇಹಿತ ರವಿಶಂಕರ್ ಜೊತೆಯಲ್ಲಿ ವಾಟ್ಸ್‌ಆ್ಯಪ್ ಚಾಟಿಂಗ್ ಮಾಡಿದ್ದ ಸಂದೇಶಗಳನ್ನು ರಾಗಿಣಿ ಅಳಿಸಿ ಹಾಕಿದ್ದಾರೆ. ಆ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.