ಸೋಮವಾರ, ಆಗಸ್ಟ್ 2, 2021
24 °C
ಸುಶಾಂತ್ ಸಿಂಗ್‌‌ ಸಹನಟಿ ಸಂಜನಾಗೆ ತಿರುಗುಬಾಣವಾದ ಪೋಸ್ಟ್‌

‘ದಿಲ್‌ ಬೇಚಾರ’ ನಟಿ ಬಾಲಿವುಡ್‌ಗೆ ಗುಡ್‌ಬೈ ಹೇಳಿದ್ರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಕೊನೆಯ ಚಿತ್ರ ‘ದಿಲ್‌ ಬೇಚಾರ’ದ ನಾಯಕಿ ಸಂಜನಾ ಸಂಘಿ ಬಾಲಿವುಡ್‌ಗೆ ಗುಡ್‌ಬೈ ಹೇಳಿದ್ರಾ? ಹಾಗಂತ ಒಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

ಬಹುಶಃ ಸಹನಟ ಸುಶಾಂತ್ ಆತ್ಮಹತ್ಯೆಯಿಂದ ನೊಂದು ನಿಜವಾಗಿಯೂ ದೆಹಲಿ ಮೂಲದ ಈ ನಟಿ ನಟನೆಗೆ ವಿದಾಯ ಹೇಳಿಬಿಟ್ರಾ? ಸಂಜನಾ ಬುಧವಾರ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್‌ ನಂತರ ಈ ಪುಕಾರು ಎದ್ದಿದೆ.

‘ದಿಲ್‌ ಬೇಚಾರ’ ನನ್ನ ಮೊದಲ ಚಿತ್ರ. ಮುಂಬೈ ಮತ್ತು ಬಾಲಿವುಡ್‌ಗೆ ನಾನೇಕೆ ಗುಡ್‌ಬೈ ಹೇಳಲಿ’ ಎಂದು ಗೊಂದಲ ಸರಿಪಡಿಸುವಲ್ಲಿಯೇ ಸಂಜನಾ ಸುಸ್ತಾಗಿದ್ದಾರೆ. ಹಾಗಾದರೆ ನಿಜವಾಗಿಯೂ ಈ ಗೊಂದಲಕ್ಕೆ ಕಾರಣವೇನು ಎಂದು ಆಕೆಯ ಮಾತಲ್ಲೇ ಕೇಳಿ...

‘ಲಾಕ್‌ಡೌನ್‌ನಲ್ಲಿ ಮುಂಬೈನಲ್ಲಿದ್ದ ನಾನು ಮೂರ‍್ನಾಲ್ಕು ತಿಂಗಳಿಂದ ದೆಹಲಿಗೆ ಹೋಗಲಾಗಿರಲಿಲ್ಲ. ಬಹಳ ದಿನಗಳ ನಂತರ ಅಪ್ಪ, ಅಮ್ಮನನ್ನು ನೋಡಲು ಮತ್ತೆ ದೆಹಲಿ ಹೊರಟು ನಿಂತೆ. ಸಹಜವಾಗಿ ಮುಂಬೈ ಏರ್‌ಪೋರ್ಟ್‌ನಲ್ಲಿ ಸೆಲ್ಫಿ ತೆಗೆಸಿಕೊಂಡು ಪೋಸ್ಟ್‌ ಮಾಡಿದ್ದೆ. ಅದೇ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ’ ಎಂದು ಸಮಜಾಯಿಷಿ ನೀಡಿದ್ದಾರೆ. 

ಬಹುಶಃ ಸಂಜನಾ ಅಷ್ಟೇ ಮಾಡಿದ್ದರೆ ಏನೂ ಆಗುತ್ತಿರಲಿಲ್ಲವೇನೋ! ಫೋಟೊ ಜತೆ ಆಕೆ ಬರೆದ ಅಸ್ಪಷ್ಟ ಒಕ್ಕಣೆ ಎಲ್ಲ ಗೊಂದಲಗಳನ್ನು ಹುಟ್ಟು ಹಾಕಿದೆ. ಹಾಗಾದರೆ ಫೋಟೊ ಜತೆ ಆಕೆ ಏನು ಬರೆದಿದ್ದರು ನೋಡಿ... 

‘ಖುದಾ ಹಾಫಿಜ್‌ ಮುಂಬೈ! ಮೈ ಚಲೀ ದಿಲ್ಲಿ ವಾಪಸ್‌!! ಮಿಲ್ತೆ ಹೈ ಜಲ್ದಿ, ಯಾ ಶಾಯದ್‌ ನಹಿ’ ಎಂದು ಬರೆದದ್ದರು. ಬಾಲಿವುಡ್‌ ಮಂದಿಗೆ ಇಷ್ಟು ಸಾಕಾಗಿತ್ತು. ಸುಶಾಂತ್‌ ಸಾವಿನಿಂದ ನೊಂದಿರುವ ಸಂಜನಾ ಮುಂಬೈ ಮತ್ತು ಬಾಲಿವುಡ್ ತೊರೆದು ವಾಪಸ್‌ ದೆಹಲಿಗೆ ಹೊರಟು ಹೋಗಿದ್ದಾರೆ ಎಂದು ಸುದ್ದಿ ಹಬ್ಬಿಸಿದರು. 

ಜುಲೈ 24ರಂದು ಡಿಸ್ನಿ+ಹಾಟ್‌ ಸ್ಟಾರ್ ಚಾನೆಲ್‌ನಲ್ಲಿ ‘ದಿಲ್‌ ಬೇಚಾರ’ ಪ್ರಸಾರವಾಗುತ್ತಿದೆ. ಇದು ಸಂಜನಾ ಅಭಿಯನದ ಮೊದಲ ಮತ್ತು ಸುಶಾಂತ್‌ ನಟನೆಯ ಕೊನೆಯ ಚಿತ್ರ.!!!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು