ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲುಗು ನಟ ಆದಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ನಿಕ್ಕಿ ಗಲ್ರಾನಿ

Published : 27 ಮಾರ್ಚ್ 2022, 7:51 IST
ಫಾಲೋ ಮಾಡಿ
Comments

ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಾರ್ಚ್‌ 23ರ ಬುಧವಾರದಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾನುವಾರ (ಮಾ.27) ಇನ್‌ಸ್ಟಾಗ್ರಾಂನಲ್ಲಿ ಆದಿ ಎಂಗೇಜ್‌ಮೆಂಟ್‌ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ನಾವು ಪರಸ್ಪರ ಇಷ್ಟಪಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಮಾರ್ಚ್ 23 ನಮ್ಮಿಬ್ಬರ ಪಾಲಿಗೂ ಮರೆಯಲಾಗದ ದಿನ. ಅಂದು ಕುಟುಂಬದವರು, ಹಿರಿಯರು, ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ‘ ಎಂದು ಆದಿ ಪೋಸ್ಟ್‌ ಹಾಕಿದ್ದಾರೆ. ನಿಕ್ಕಿ ಸಹ ಇದೇ ಚಿತ್ರವನ್ನು ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಕನ್ನಡದ ಅಜಿತ್‌, ಓ ಪ್ರೇಮವೇ, ಜಂಬೂ ಸವಾರಿ, ಸಿದ್ಧಾರ್ಥ ಸಿನಿಮಾಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಸದ್ಯ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸುತ್ತಿದ್ದಾರೆ.

ಆದಿ ಕೂಡ ತೆಲುಗು, ತಮಿಳಿನ ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೊಚಾಡಿಯನ್‌, ತೆಲುಗಿನ ರಂಗಸ್ಥಳಂ, ಗುಡ್ ಲಕ್ ಸಖಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿಕ್ಕಿ ಗಲ್ರಾನಿ ಅವರುಕನ್ನಡದ ನಟಿ ಸಂಜನಾ ಗಲ್ರಾನಿ ಅವರ ಸಹೋದರಿಯಾಗಿದ್ದಾರೆ. ನಿಕ್ಕಿ ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ ಅಭಿಮಾನಿಗಳು ಮತ್ತು ಸಿನಿತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT