‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಬಾಲಿವುಡ್ ಬಳಿಕ ಇದೀಗ ಟಾಲಿವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ನಿತಿನ್ಗೆ ನಾಯಕಿಯಾಗಿದ್ದಾರೆ. ಈ ಜೋಡಿಯ ‘ಮೂಡ್ ಆಫ್ ತಮ್ಮುಡು’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಶ್ರೀರಾಮ್ ವೇಣು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ರತ್ನ ಪಾತ್ರದ ಮೂಲಕ ಹಳ್ಳಿ ಹುಡುಗಿ ಗೆಟಪ್ನಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದು, ಲಂಗ ದಾವಣಿಯೊಂದಿಗೆ ಗಮನ ಸೆಳೆದಿದ್ದಾರೆ. ನಾಯಕ ನಿತಿನ್ ಬಿಲ್ಲು, ಬಾಣದೊಂದಿಗೆ ಆರ್ಚರಿ ಆಟಗಾರನ ಗೆಟಪ್ನಲ್ಲಿದ್ದಾರೆ.

ಇವರೊಂದಿಗೆ ಕೊಡಗಿನ ನಟಿ ವರ್ಷ ಬೊಳ್ಳಮ್ಮ, ಸೌರಭ್ ಸಚ್ದೇವ್ ಸೇರಿದಂತೆ ಅನೇಕರು ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಚಿತ್ರ ಜುಲೈ 4ರಂದು ತೆರೆಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.