ಸೋಮವಾರ, ಮಾರ್ಚ್ 1, 2021
24 °C

ಏಷ್ಯಾದ ಸೆಕ್ಸಿಮಹಿಳೆ ದೀಪಿಕಾ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

Deccan Herald

ಇತ್ತೀಚೆಗಷ್ಟೇ ಅತ್ಯಂತ ಅದ್ದೂರಿಯಾಗಿ ಮದುವೆ ಮತ್ತು ಆರತಕ್ಷತೆ ಮುಗಿಸಿದ ಇಬ್ಬರು ಮದುಮಕ್ಕಳು ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಮುಡಿಗೆ ‘ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ’ ಎಂಬ ಗರಿ ಸೇರಿಕೊಂಡಿದೆ. ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಪ್ರಿಯಾಂಕಾ ಅವರನ್ನು ಹಿಂದಿಕ್ಕಿ ದೀಪಿಕಾ ಆ ಸ್ಥಾನವನ್ನು ಈ ಬಾರಿ ತಮ್ಮದಾಗಿಸಿಕೊಂಡಿದ್ದಾರೆ.

ಲಂಡನ್‌ನ ಈಸ್ಟರ್ನ್‌ ಐ ಸಾಪ್ತಾಹಿಕವು ‍‍ಪ್ರತಿ ವರ್ಷ ನಡೆಸುವ ‘ಏಷ್ಯಾದ 50 ಸೆಕ್ಸಿ ಮಹಿಳೆಯರು’ ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಂಡು ತಮ್ಮಿಷ್ಟದ ಸೆಲೆಬ್ರಿಟಿಗಳಿಗೆ ಮತ ಚಲಾಯಿಸುತ್ತಾರೆ. ಸಾಪ್ತಾಹಿಕವು 15 ವರ್ಷಗಳಿಂದಲೂ ಈ ಸಮೀಕ್ಷೆ ನಡೆಸುತ್ತಿದೆ. 

‘ದೀಪಿಕಾ ಪಡುಕೋಣೆ ಬಾಲಿವುಡ್‌ನ ವಿವಾದಾತೀತ ‘ಮಸ್ತಾನಿ’ ಹಾಗೂ ಸುಂದರಿಯಾಗಿರುವ ಅವರು ಪ್ರಸಿದ್ಧಿಯ ತುತ್ತತುದಿ ಏರಿದ್ದರೂ ಬಿಗುಮಾನವಿಲ್ಲದ ನಟಿ. ಅವರ ನಮ್ರತೆ ಅನುಕರಣೀಯ. ಅಲ್ಲದೆ, ಮಾನಸಿಕ ಸ್ವಾಸ್ಥ್ಯದ ಬಗೆಗಿನ ಜಾಗೃತಿ ಅಭಿಯಾನ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ. ಅಲ್ಲದೆ ನಮ್ಮೊಳಗನ್ನು ಬೆಳಗಲು ಪ್ರೇರಣೆ ನೀಡುತ್ತಿದೆ. ಹಾಗಾಗಿ ಎಲ್ಲಾ ಬಗೆಯಿಂದಲೂ ಈ ಗೌರವಕ್ಕೆ ಅರ್ಹರಾಗಿದ್ದಾರೆ’ ಎಂದು ಈಸ್ಟರ್ನ್‌ ಐ ಸಾಪ್ತಾಹಿಕ ಮನರಂಜನಾ ವಿಭಾಗದ ಸಂಪಾದಕ ಅಸ್ಜದ್‌ ನಜೀರ್‌ ಹೇಳಿದ್ದಾರೆ. 

ಈ ಸಮೀಕ್ಷೆಯಲ್ಲಿ ಕಿರುತೆರೆ ನಟಿ ನಿಯಾ ಶರ್ಮಾ ಮೂರನೇ ಸ್ಥಾನ, ಪಾಕಿಸ್ತಾನದ ನಟಿ ಮಹಿರಾ ಖಾನ್‌ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಶಿವಾಂಗಿ ಜೋಷಿ, ಆಲಿಯಾ ಭಟ್‌, ಸೋನಂ ಕಪೂರ್‌, ಹೀನಾ ಖಾನ್‌, ಕತ್ರಿನಾ ಕೈಫ್‌, ನಿತಿ ಟೇಯ್ಲರ್‌ ಕ್ರಮವಾಗಿ 5ರಿಂದ 10ನೇ ಸ್ಥಾನಗದಲ್ಲಿದ್ದಾರೆ. 20ರ ಹರೆಯದ ಶಿವಾಂಗಿ, ಈ ಗೌರವಕ್ಕೆ ಪಾತ್ರರಾದ ಅತ್ಯಂತ ಕಿರಿಯ ಸೆಲೆಬ್ರಿಟಿ. ಅಲ್ಲದೆ, 18ರ ಆಶಿ ಸಿಂಗ್‌ ಎಂಬ ನಟಿಯೂ ಗಮನಾರ್ಹ ಪ್ರಮಾಣದ ಮತಗಳನ್ನು ಗಳಿಸಿದ್ದಾರೆ ಎಂದು ‘ಈಸ್ಟರ್ನ್‌ ಐ’ ಹೇಳಿದೆ.

ಫೋರ್ಬ್ಸ್‌ ಪಟ್ಟಿಯಲ್ಲೂ ದೀಪಿಕಾ

ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ ಅತ್ಯಂತ ಶ್ರೀಮಂತ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ನಾಲ್ಕನೇ ಸ್ಥಾನ ಪಡೆದಿದ್ದು, ಅಗ್ರ ಐದು ಸ್ಥಾನಗಳಲ್ಲಿ ಕಾಣಿಸಿಕೊಂಡ ಮೊದಲ ಮಹಿಳೆ ಎಂಬ ಈ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಫೋರ್ಬ್ಸ್‌ ವರದಿ ಪ್ರಕಾರ ಚಲನಚಿತ್ರ, ಕಿರುತೆರೆ ಹಾಗೂ ಜಾಹೀರಾತು ಮೂಲದಿಂದ 2017ರ ಅಕ್ಟೋಬರ್ 1ರಿಂದ 2018ರ ಸೆಪ್ಟೆಂಬರ್‌ 30ರ ಅವಧಿಯಲ್ಲಿ ದೀಪಿಕಾ ಒಟ್ಟು ₹112.80 ಕೋಟಿ ಆದಾಯ ಗಳಿಸಿದ್ದಾರೆ. ಅವರ ಪತಿ ರಣವೀರ್‌ ಸಿಂಗ್‌ ₹ 84.67 ಕೋಟಿ ಗಳಿಕೆಯೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಅಲಿಯಾ ಭಟ್‌, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್‌, ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಸೇರಿ ಒಟ್ಟು 18 ಮಹಿಳೆಯರು ಪಟ್ಟಿಯಲ್ಲಿದ್ದಾರೆ.

₹ 253.25 ಕೋಟಿ ಆದಾಯ ಹೊಂದಿರುವ ಸಲ್ಮಾನ್‌ ಖಾನ್‌ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರದ ಎರಡು ಸ್ಥಾನಗಳಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಇದ್ದು, 2018ರಲ್ಲಿ ಇವರಿಬ್ಬರು ಕ್ರಮವಾಗಿ ₹228.09 ಕೋಟಿ, ₹185 ಕೋಟಿ ಆದಾಯ ಗಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತದ ತಾರೆಯರ ಒಟ್ಟು ಗಳಿಕೆಯೂ ಶೇ.17ರಷ್ಟು ಏರಿಕೆಯಾಗಿದೆ. ಕಳೆದ ಬಾರಿ ₹2,683 ಕೋಟಿ ಗಳಿಸಿದ್ದ ತಾರೆಯರು ಈ ಬಾರಿ ₹3,140.25 ಕೋಟಿ ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು