ಕುಟುಂಬದ ಜತೆ ಶಾಹಿದ್ ಪಿಕ್‌ನಿಕ್

ಬುಧವಾರ, ಜೂನ್ 26, 2019
22 °C

ಕುಟುಂಬದ ಜತೆ ಶಾಹಿದ್ ಪಿಕ್‌ನಿಕ್

Published:
Updated:
Prajavani

‘ಕಬೀರ್ ಸಿಂಗ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಬ್ಯುಸಿಯಾಗುವ ಮುನ್ಸೂಚನೆ ದೊರೆತ ಶಾಹಿದ್ ಕಪೂರ್, ಪತ್ನಿ ಮೀರಾ, ಮಕ್ಕಳಾದ ಮಿಶಾ ಮತ್ತು ಜೇನ್ ಕಪೂರ್ ಜೊತೆಗೆ ಪಿಕ್‌ನಿಕ್‌ಗೆ ತೆರಳಿದ್ದಾರೆ. 

ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ‘ಫ್ಯಾಮಿಲಿ ಮ್ಯಾನ್’ ಅಂತಲೇ ಶಾಹಿದ್ ಗುರುತಿಸಿಕೊಂಡಿದ್ದು, ವೈಯಕ್ತಿಕ ಜೀವನದ ಸಂತಸದ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಪ್ಪದೇ ಹಂಚಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಸಿನಿಮಾ ಅಥವಾ ಸಿನಿಮೇತರ ಕಾರ್ಯಕ್ರಮಗಳಿರಲಿ ಅಲ್ಲಿ ಪತ್ನಿ ಮೀರಾಳ ಹಾಜರಿ ಕಡ್ಡಾಯವಾಗಿರುವಂತೆ ನೋಡಿಕೊಳ್ಳುತ್ತಾರೆ ಶಾಹಿದ್. ಇನ್ನು ಪುಟ್ಟ ಮಕ್ಕಳಾದ ಮಿಶಾ ಮತ್ತು ಜೇನ್ ವಿಷಯಕ್ಕೆ ಬಂದಲ್ಲಿ ಶೂಟಿಂಗ್‌ ಮುಗಿಸಿ ಎಷ್ಟೇ ದಣಿವಾಗಿದ್ದರೂ ಮಕ್ಕಳ ಜೊತೆ ಆಟವಾಡುವುದನ್ನು ಶಾಹಿದ್ ತಪ್ಪಿಸುವುದಿಲ್ಲ. 

ಈಚೆಗಷ್ಟೇ ಕುಟುಂಬದ ಜೊತೆಗೆ ಸಿಂಗಪುರಕ್ಕೆ ತೆರಳಿದ್ದ ಶಾಹಿದ್ ಅಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಕಂಡು ಅಚ್ಚರಿಪಟ್ಟರು. ಮಿರಾ ಒಂದು ಕೈಯಲ್ಲಿ ಮೇಣದ ಶಾಹಿದ್‌ನನ್ನು ಮತ್ತೊಂದು ಕೈಯಲ್ಲಿ ಜೀವಂತ ಶಾಹಿದ್‌ ಕೈ ಹಿಡಿದು ಫೋಟೊಗಳಿಗೆ ಫೋಸ್ ನೀಡಿದರು. ನಂತರ  ಹೆಂಡತಿ–ಮಕ್ಕಳೊಂದಿಗೆ ಥಾಯ್ಲೆಂಡ್‌ನ ಫುಕೆಟ್ ಸಮುದ್ರ ತೀರದಲ್ಲಿ ಕಾಲ ಕಳೆದ ಶಾಹಿದ್, ಪತ್ನಿ ಮೀರಾ ಜೊತೆಗಿನ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದೊಡ್ಡ ಸನ್‌ಗ್ಲಾಸ್ ಹಾಕಿಕೊಂಡಿರುವ ಶಾಹಿದ್ ‘ನಾವು’ ಅನ್ನುವ ಶೀರ್ಷಿಕೆಯನ್ನೂ ನೀಡಿದ್ದಾರೆ. ಮೇಕಪ್ ಇಲ್ಲದೆಯೂ ಮೀರಾ ಮುದ್ದಾಗಿ ಕಾಣುತ್ತಿದ್ದಾರೆ. ಸಮುದ್ರದ ದಂಡೆಯಲ್ಲಿ ಮರಳ ಮೇಲಿರುವ ಮಕ್ಕಳ ಚಿತ್ರವನ್ನು ಮೀರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. 

ತೆಲುಗಿನ ಹಿಟ್ ಸಿನಿಮಾ ’ಅರ್ಜುನ್ ರೆಡ್ಡಿ’ ರಿಮೇಕ್ ಆಗಿರುವ ‘ಕಬೀರ್ ಸಿಂಗ್‌’ ಜೂನ್ 21ರಂದು ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮಾಡಿದ್ದ ಪಾತ್ರವನ್ನು ಶಾಹಿದ್ ಕಪೂರ್ ನಿರ್ವಹಿಸಿದ್ದು, ಕಿಯಾರ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !