ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ | ವಶೀಕರಣದ ಕಥೆ ಹೇಳುವ 'ಶೈತಾನ್‌'

Published 23 ಫೆಬ್ರುವರಿ 2024, 7:27 IST
Last Updated 23 ಫೆಬ್ರುವರಿ 2024, 7:27 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ನಟ ಅಜಯ್​ ದೇವಗನ್ ಹಾಗೂ ನಟಿ ಜ್ಯೋತಿಕಾ ಅಭಿನಯದ ‘ಶೈತಾನ್​’ ಸಿನಿಮಾದ ಟ್ರೈಲರ್‌ ಶುಕ್ರವಾರ ಬಿಡುಗಡೆಯಾಗಿದೆ.

ಟ್ರೈಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಶೀಕರಣದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸದ್ಯ ಈ ಸಿನಿಮಾ ಮಾರ್ಚ್​ 8ರಂದು ಬಿಡುಗಡೆಯಾಗಲಿದೆ. 

ವಿಶೇಷವೆಂದರೆ, ಈ ಸಿನಿಮಾದಲ್ಲಿ ಆರ್​. ಮಾಧವನ್​ ಖಳ ನಟನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಮೇಕಿಂಗ್ ಅದ್ಬುತವಾಗಿದ್ದು ಟ್ರೈಲರ್‌ ನೋಡಿದರೆ ಭಯವಾಗುತ್ತದೆ ಎಂದು ನೆಟ್ಟಿಗರು ತಮ್ಮ ವಾಲ್‌ಗಳಲ್ಲಿ ಬರೆದುಕೊಂಡಿದ್ದಾರೆ.

ಅಜಯ್​ ದೇವಗನ್​ ಮನೆಗೆ ಸಹಾಯ ಕೇಳಿಕೊಂಡು ಮಾಧವನ್ ಬರುತ್ತಾರೆ. ಬಳಿಕ ಅವರ ಮಗಳನ್ನು ವಶೀಕರಣ ಮಾಡುತ್ತಾರೆ. ನಂತರ ಮಾಧವನ್‌ ಹೇಳಿದಂತೆ ಅಜಯ್‌ ದೇವಗನ್‌ ಮಗಳು ಕೇಳುತ್ತಾಳೆ. ತಂದೆ-ತಾಯಿಗೆ ಹೊಡೆಯಲೂ ಆಕೆ ಹಿಂಜರಿಯುವುದಿಲ್ಲ. ಹೀಗೆ ವಶೀಕರಣದ ಕಹಾನಿಯನ್ನು ತೋರಿಸಲಾಗಿದೆ. ​  

ಖ್ಯಾತ ನಿರ್ದೇಶಕ ವಿಕಾಸ್​ ಬೆಹ್ಲ್​ ‘ಶೈತಾನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT