ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲೇ ‘ಶಾರ್ದೂಲ’ ಬಿಡುಗಡೆ

Last Updated 11 ಜೂನ್ 2020, 4:56 IST
ಅಕ್ಷರ ಗಾತ್ರ

ಅರವಿಂದ್ ಕೌಶಿಕ್ ನಿರ್ದೇಶನದ ‘ಶಾರ್ದೂಲ’ ಚಿತ್ರಕ್ಕೆ ಕರ್ನಾಟಕಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರ ನೀಡಿದೆ.

ಥ್ರಿಲ್ಲರ್ ಕಥಾಹಂದರದ ಈ ಚಿತ್ರದ ಟ್ರೇಲರ್‌ ವಿಭಿನ್ನವಾಗಿದ್ದು, ಕುತೂಹಲ ಮೂಡಿಸುವಂತಿದೆ. ಇಬ್ಬರು ನಾಯಕರು ಮತ್ತು ಇಬ್ಬರು ನಾಯಕಿಯರು ಈ ಚಿತ್ರದಲ್ಲಿದ್ದಾರೆ.

ಕೊರೊನೊ ಕಾರಣಕ್ಕೆ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ‌ದೊರಕಿದ ಕೂಡಲೆ ಚಿತ್ರವನ್ನು ಚಿತ್ರಮಂದಿರದಲ್ಲಿ ಅಥವಾ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

‘ಒಟಿಟಿ ವೇದಿಕೆಗಳಲ್ಲೂ ಚಿತ್ರ ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ. ಮಾತುಕತೆ ಫಲಪ್ರದವಾದರೆಅಮೆಜಾನ್‌ ಪ್ರೈಮ್‌ ಅಥವಾ ನೆಟ್‌ಫ್ಲಿಕ್ಸ್‌ನಲ್ಲೂ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ನಿರ್ಮಾಪಕರು.

‘ನಮ್‌ ಏರಿಯಲ್ಲೊಂದು‌ ದಿನ’, ‘ತುಘಲಕ್’ ಹಾಗೂ ‘ಹುಲಿರಾಯ’ ಚಿತ್ರಗಳನ್ನು ಅರವಿಂದ್‌ ಕೌಶಿಕ್ನಿರ್ದೇಶಿಸಿದ್ದರು.‘ಶಾರ್ದೂಲ’ ಚಿತ್ರಕ್ಕೆ ಅರವಿಂದ್‌ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ದೆವ್ವ ಇರಬಹುದ್ದಾ? ಎಂಬ ಅಡಿಬರಹ ಈ ಚಿತ್ರಕ್ಕಿದೆ.

‘ಪಿಯುಸಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ ಮತ್ತು ನಟ ರವಿತೇಜ, ಕೃತಿಕಾ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ತಾರಾಗಣದಲ್ಲಿದ್ದಾರೆ.

ಭೈರವ ಸಿನಿಮಾಸ್ ಲಾಂಛನದಡಿ ಕಲ್ಯಾಣ್ ಸಿ. ಮತ್ತು ರೋಹಿತ್ ಎಸ್. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣ ವೈ.ಜಿ.ಆರ್ ಮನು, ಸಂಗೀತಸತೀಶ್ ಬಾಬು, ಸಂಕಲನಶಿವರಾಜ್ ಮೇಹು ಹಾಗೂ ಮಾಸ್ ಮಾದ, ಸಾಹಸ ನಿರ್ದೇಶನಅಲ್ಟಿಮೇಟ್ ಶಿವ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT