ಭಾನುವಾರ, ನವೆಂಬರ್ 27, 2022
26 °C

ಮರ್ಡರ್ ಲೈವ್’ನಲ್ಲಿ ಶರ್ಮಿಳಾ ಮಾಂಡ್ರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಇತ್ತೀಚೆಗಷ್ಟೆ ಗಾಳಿಪಟ–2ನಲ್ಲಿ ಮಿಂಚಿದ್ದ ನಟಿ ಶರ್ಮಿಳಾ ಮಾಂಡ್ರೆ, ‘ಮರ್ಡರ್‌ ಲೈವ್‌’ಎಂಬ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

‘ಮಿರತ್ತಲ್’ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಇವರು, 10 ವರ್ಷಗಳ ನಂತರ ಮತ್ತೆ ತಮಿಳಿನಲ್ಲಿ ನಟಿಸುತ್ತಿದ್ದಾರೆ. ‘ಮರ್ಡರ್ ಲೈವ್’ ಒಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ‘ಬ್ಲೈಂಡ್ ಡೇಟ್’, ‘ಸ್ಕೈ ಹೈ’, ‘ಗ್ಲಿಚ್’ ಮುಂತಾದ ಹಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಅವರ ಕಥೆಯನ್ನು ಆಧರಿಸಿದೆ. ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಸುತ್ತುವ ಈ ಚಿತ್ರದಲ್ಲಿ, ಕಷ್ಟದ ಪರಿಸ್ಥಿಯಲ್ಲಿ ಸಾಮಾನ್ಯ ಮನುಷ್ಯರೂ ಹೇಗೆ ಸಿಡಿದೆದ್ದು ಹೀರೊಗಳಾಗುತ್ತಾರೆ ಎಂದು ಹೇಳಲಾಗಿದೆ.

ಜಗತ್ತಿನ ಯಾವುದೇ ಕಂಪ್ಯೂಟರ್ ಹ್ಯಾಕ್ ಮಾಡಿ, ಅದರ ಮೂಲಕ ಲೈವ್ ಆಗಿ ಕೊಲೆ ಮಾಡುವ ಕಥೆ ಇರುವ ಈ ಚಿತ್ರವನ್ನು ಸಂಪೂರ್ಣವಾಗಿ ಇಂಗ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಸೂರ್ಯ ಅಭಿನಯದ ‘ಇಟಿ’ ಮತ್ತು ಶಿವಕಾರ್ತಿಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದ ವಿನಯ್ ರೈ, ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್ ನಟಿ ನವೋಮಿ ವಿಲ್ಲೋ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ಡಾಟ್‌ಕಾಮ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಮುರುಗೇಶ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ 'ಮರ್ಡರ್ ಲೈವ್' ಚಿತ್ರದ ಚಿತ್ರೀಕರಣ ಮುಗಿದಿದ್ದು, ಮುಂದಿನ ಕೆಲಸಗಳು ಪ್ರಗತಿಯಲ್ಲಿವೆ ಎಂದು ಚಿತ್ರತಂಡ ಹೇಳಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು