ಗಗನಯಾನಿ ರಾಕೇಶ್ ಶರ್ಮಾ ಅವರ ಜೀವನಾಧಾರಿತ ಸಿನಿಮಾ ಕುರಿತು ಬಾಲಿವುಡ್‌ನಲ್ಲಿ ಆಗಾಗ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ಇದುವರೆಗೂ ಈ ಸಿನಿಮಾಕ್ಕೆ ನಾಯಕ–ನಾಯಕಿ ಯಾರು ಎಂಬುದು ಬಹಿರಂಗಗೊಂಡಿರಲಿಲ್ಲ. ಆರಂಭದಲ್ಲಿ ಈ ಸಿನಿಮಾಕ್ಕೆ ‘ಸೆಲ್ಯೂಟ್’ ಎನ್ನುವ ಹೆಸರಿಡಬೇಕೆಂದು ತೀರ್ಮಾನಿಸಲಾಗಿತ್ತಾದರೂ, ಅದೀಗ ‘ಸಾರೆ ಜಹಾನ್ ಸೇ ಅಚ್ಚಾ’ ಎಂದು ಮರು ನಾಮಕರಣಗೊಂಡಿದೆ.

ರೋನಿ ಸ್ಕ್ರೀನ್‌ವಾಲಾ ಸಹ ನಿರ್ಮಾಪಕರಾಗಿರುವ ಈ ಸಿನಿಮಾದಲ್ಲಿ ನಟ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಬಹುತೇಕ ಖಚಿತವಾಗಿದ್ದು, ಪಾತ್ರದ ಹೆಸರು ಇನ್ನೂ ಬಹಿರಂಗಗೊಂಡಿಲ್ಲ. ಶಾರುಖ್ ಮುಖ್ಯ ಪಾತ್ರಕ್ಕೆ ನಿಕ್ಕಿಯಾಗಿರುವುದನ್ನು ಸ್ವತಃ ರೋನಿ ಅವರೇ ಈಚೆಗೆ ಖಚಿತಪಡಿಸಿಕೊಂಡಿದ್ದು, ನಾಯಕಿಯಾಗಿ ಭೂಮಿ ಫೆಡ್ನೇಕರ್ ಅಭಿನಯಿಸಲಿದ್ದಾರೆ.

ಮಹೇಶ್ ಮಥಾಯಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಿದ್ದಾರ್ಥ್ ರಾಯ್ ಕಪೂರ್ ಕೂಡಾ ಸಹ ನಿರ್ಮಾಪಕರಾಗಿದ್ದು, ಶೀಘ್ರದಲ್ಲೇ ಚಿತ್ರದ ಹೆಸರಿನ ಕುರಿತು ಚಿತ್ರತಂಡ ಘೋಷಣೆ ಮಾಡಲಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.