ಮುಂಬೈ: ಸೋನಿ ಟಿವಿ ಪ್ರಾಯೋಜಕತ್ವದ 'ಸೂಪರ್ ಡ್ಯಾನ್ಸರ್ - ಚಾಪ್ಟರ್ 4' ರಿಯಾಲಿಟಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ನಟ ಸುನಿಲ್ ಶೆಟ್ಟಿ, 2000ನೇ ಇಸವಿಯಲ್ಲಿ ಬಿಡುಗಡೆಯಾದ ಸೂಪರ್ ಹಿಟ್ 'ಧಡ್ಕನ್' ಚಿತ್ರದ ಜನಪ್ರಿಯ ದೃಶ್ಯದ ಮರು ಸೃಷ್ಟಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸೂಪರ್ ಡ್ಯಾನ್ಸರ್ - ಚಾಪ್ಟರ್ 4 ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ತೀರ್ಪುಗಾರ್ತಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಸುನಿಲ್ ಶೆಟ್ಟಿ ವಿಶೇಷ ಆತಿಥಿಯಾಗಿ ಭಾಗವಹಿಸಿದ್ದಾರೆ.

ಇದನ್ನೂ ಓದಿ:ಐಶ್ವರ್ಯಾಗೆ ಹೋಲುವ ಸೌಂದರ್ಯ; ಕಣ್ಮನ ಸೆಳೆದ ಸ್ನೇಹಾ ಉಲ್ಲಾಳ್

ಸೋನಿ ಟಿವಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಗ್ಲಾಮರ್ ಗೊಂಬೆ ಶಿಲ್ಪಾ ಹಾಗೂ ಸುನಿಲ್ ಶೆಟ್ಟಿ ತಮ್ಮ ನಟನಾ ಕೌಶಲ್ಯದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.

ಧಡ್ಕನ್ ಚಿತ್ರದ ರೋಚಕ ದೃಶ್ಯದ ಮರುಸೃಷ್ಟಿಯ ಬಳಿಕ 'ದಿಲ್ ನೆ ಏ ಕಹಾ ಹೈ ದಿಲ್ ಸೇ...' ಜನಪ್ರಿಯ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಈ ನಡುವೆ ಸ್ಪರ್ಧಿಗಳು 'ಸಂದೇಶ ಅತಿ ಹೈ...' ದೇಶಭಕ್ತಿ ಹಾಡಿಗೆ ಹೆಜ್ಜೆ ಹಾಕಿರುವುದು ಸುನಿಲ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅವರ ಭಾವುಕ ಕ್ಷಣಗಳಿಗೆ ಕಾರಣವಾಯಿತು.

ಇದಕ್ಕೂ ಮೊದಲು ಶಿಲ್ಪಾ ಶೆಟ್ಟಿ ಹಳದಿ ಉಡುಪಿನಲ್ಲಿ ಕಂಗೊಳಿಸುವ ವಿಡಿಯೋವನ್ನುಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಒಟ್ಟಿನಲ್ಲಿ ಶಿಲ್ಬಾ ಶೆಟ್ಟಿ-ಸುನಿಲ್ ಶೆಟ್ಟಿ ಹಳೆಯ ಕೆಮೆಸ್ಟ್ರಿಗೆ ಕಾರ್ಯಕ್ರಮವು ಉತ್ತಮ ವೇದಿಕೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.