ಮಂಗಳವಾರ, ಡಿಸೆಂಬರ್ 7, 2021
27 °C

ರಮೇಶ್ ಅಭಿನಯದ 'ಶಿವಾಜಿ ಸುರತ್ಕಲ್–2' ಸಿನಿಮಾ; ಡಿಸೆಂಬರ್‌ನಲ್ಲಿ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2020ರಲ್ಲಿ ಬಿಡುಗಡೆಯಾಗಿದ್ದ ರಮೇಶ್‌ ಅರವಿಂದ್‌ ಅವರ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌’ ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರದ ಎರಡನೇ ಭಾಗದ ಮುಹೂರ್ತ ಗುರುವಾರ ಮಲ್ಲೇಶ್ವರದ ಬಂಡೆ ಗಣೇಶ ದೇವಸ್ಥಾನದಲ್ಲಿ ನಡೆಯಿತು.

ಶಿವಾಜಿಯಾಗಿ ರಮೇಶ್ ಅರವಿಂದ್‌ ಅವರು ಎರಡನೇ ಭಾಗದಲ್ಲೂ ಬಣ್ಣ ಹಚ್ಚಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2ರಲ್ಲೂ ಮುಂದುವರಿಯಲಿದ್ದಾರೆ. ಚಿತ್ರದಲ್ಲಿ ಡಿಸಿಪಿ ಹುದ್ದೆಯಲ್ಲಿರುವ ಯುವ ಐಪಿಎಸ್‌ ಅಧಿಕಾರಿ ‘ದೀಪ ಕಾಮತ್‌’ ಪಾತ್ರದಲ್ಲಿ ಮೇಘನಾ ಗಾಂವ್ಕರ್‌ ಕಾಣಿಸಿಕೊಳ್ಳಲಿದ್ದಾರೆ. ಮಗಳು ಜಾನಕಿ ಧಾರಾವಾಹಿಯಲ್ಲಿ ನಟಿಸಿದ್ದ ರಾಕೇಶ್ ಮಯ್ಯ, ಬಿಗ್‌ಬಾಸ್‌ ಖ್ಯಾತಿಯ ವಿನಾಯಕ ಜೋಷಿ ಅವರೂ ಇದೀಗ ಚಿತ್ರತಂಡ ಸೇರಿಕೊಂಡಿದ್ದು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕನ್ನಡ್‌ ಗೊತ್ತಿಲ್ಲ’ ಹಾಗೂ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ‘ಲವ್‌ ಮಾಕ್ಟೇಲ್‌–2’ ಸಿನಿಮಾದ ಸಂಗೀತ ನಿರ್ದೇಶಕ ನಕುಲ್‌ ಅಭಯಂಕರ್‌ ಅವರು ಶಿವಾಜಿ ಸುರತ್ಕಲ್‌–2 ಭಾಗಕ್ಕೂ ಸಂಗೀತ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು, ಅದಕ್ಕೆ ಬೇಕಾದ ಸಿದ್ದತೆಗಳು ನಡೆಯುತ್ತಿದೆ ಎಂದು ನಿರ್ದೇಶಕ ಆಕಾಶ್‌ ಶ್ರೀವತ್ಸ ತಿಳಿಸಿದ್ದಾರೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು