ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ನಟ ಪ್ರಕಾಶ್ ರಾಜ್, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಸಾಹಿತಿ ಜೋಗಿ, ಕವಿ ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ಕರುನಾಡಿನ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿತ್ರ ತಾರೆಯರಾದ ನಿಧಿ ಸುಬ್ಬಯ್ಯ, ರಚನಾ ಇಂದರ್, ಮೋಕ್ಷಾ ಕುಶಾಲ್, ಅಂಕಿತಾ ಅಮರ್, ಅನುಷಾ ರೈ, ಪೃಥ್ವಿ ಅಂಬರ್ ನೃತ್ಯಪ್ರದರ್ಶನ, ಗಾಯಕರಾದ ವಾಸುಕಿ ವೈಭವ್, ಅಲೋಕ್ ಬಾಬು ಕಂಠಸಿರಿ ಕಾರ್ಯಕ್ರಮಕ್ಕೆ ಮೆರುಗು ನೀಡಿದೆ.
.ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ.
‘ಕನ್ನಡ ಭಾಷೆ, ಪರಂಪರೆಗೆ ಮತ್ತು ಕರ್ನಾಟಕದ ಅಭ್ಯುದಯಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಉದಯ ಟಿವಿ ʻಉದಯ ಕನ್ನಡಿಗʼ ಪುರಸ್ಕಾರ ಆರಂಭಿಸಿದೆ. ಕಲೆ, ಸಾಹಿತ್ಯ, ಶಿಕ್ಷಣ, ಮಾಧ್ಯಮ, ಸಮಾಜ ಸೇವೆ, ಕೃಷಿ, ಉದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಕನ್ನಡದ ಹಿರಿಮೆ ಹೆಚ್ಚಿಸಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಮನರಂಜನೆ ನೀಡುತ್ತಿರುವ ಉದಯ ಟಿವಿ ಬಳಗದಿಂದ ʻಉದಯ ಕನ್ನಡಿಗʼ ಪುರಸ್ಕಾರ ಕೃತಜ್ಞತೆಯ ಸಂಕೇತವಾಗಿದೆ' ಎನ್ನುತ್ತಾರೆ ಉದಯ ಟಿ.ವಿ ಮುಖ್ಯಸ್ಥರು.

ʻಉದಯ ಕನ್ನಡಿಗ-2025ʼ ಪುರಸ್ಕಾರ ಕಾರ್ಯಕ್ರಮವು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.