ಸೋಮವಾರ, ಜನವರಿ 17, 2022
18 °C

ಅಭಿಮಾನಿಗಳಿಗಾಗಿ ಪುತ್ರನ ಫೋಟೊ ಪೋಸ್ಟ್ ಮಾಡಿದ ಶ್ರೇಯಾ ಘೋಶಾಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Shreya Ghoshal Instagram

ಬೆಂಗಳೂರು: ಗಾಯಕಿ ಶ್ರೇಯಾ ಘೋಶಾಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಪುತ್ರನ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಉದ್ಯಮಿ ಶಿಲಾದಿತ್ಯ ಜತೆ ಮದುವೆಯಾಗಿರುವ ಗಾಯಕಿ ಶ್ರೇಯಾ ಘೋಶಾಲ್ ದಂಪತಿ ಕಳೆದ ಮೇ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು.

ಪುತ್ರ ದೇವ್ಯಾನ್‌ಗೆ ಈಗ ಆರು ತಿಂಗಳು ಆಗಿದ್ದು, ಇದೇ ಸಂದರ್ಭದಲ್ಲಿ ಆತನ ಜತೆಗಿನ ಫೋಟೊಗಳನ್ನು ಶ್ರೇಯಾ ಅವರು ಹಂಚಿಕೊಂಡಿದ್ದಾರೆ.

ಬಾಯಿ ತುಂಬಾ ನಗು ಹೊಂದಿರುವ ದೇವ್ಯಾನ್ ಫೋಟೊ ನೋಡಿರುವ ನೆಟ್ಟಿಗರು, 'ಕ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ.

ಶ್ರೇಯಾ ಅವರ ಪೋಸ್ಟ್ ಅನ್ನು 12 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಜತೆಗೆ ಚಿತ್ರರಂಗದ ಅನೇಕರು ಶ್ರೇಯಾ ಘೋಶಾಲ್ ಮತ್ತು ದೇವ್ಯಾನ್ ಫೋಟೊಗೆ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು