ಶನಿವಾರ, ಫೆಬ್ರವರಿ 4, 2023
28 °C

ಫೋಟೋ ಸ್ಟುಡಿಯೋಕ್ಕೆ ಗಂಧರ್ವ ಗಾನ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದೊಂದು ಸಂಗೀತ ಮಾಧುರ್ಯದೊಂದಿಗೆ ಬಂದಿದ್ದಾರೆ ಶ್ರೀರಾಮ್‌ ಗಂಧರ್ವ. ಈ ಹಿಂದೆ ಬಿಎಂಡಬ್ಲ್ಯೂ, ಪುಟ್ಟರಾಜು – ಲವರ್‌ ಆಫ್‌ ಶಶಿಕಲಾ ಚಿತ್ರಗಳ ಮೂಲಕ ಚಿತ್ರ ಸಂಗೀತದಲ್ಲಿ ಛಾಪು ಮೂಡಿಸಿದ್ದ ಅವರು, ಹೊಸದೊಂದು ಯೋಜನೆಯಲ್ಲಿ ತೊಡಗಿದ್ದಾರೆ. 

‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರದ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬಾಲಾಜಿ ಫೋಟೋ ಸ್ಟುಡಿಯೋ ಒಬ್ಬ ಛಾಯಾಗ್ರಾಹಕನ ಕಥೆ. ಚಿತ್ರದ ಎರಡು ಹಾಡುಗಳ ಪೈಕಿ ಒಂದು ಮಾಧುರ್ಯ ಹಾಗೂ ಭಾವುಕ ಸನ್ನಿವೇಶದ ಗೀತೆ. ಇನ್ನೊಂದು ಚಿತ್ರದ ಪರಿಚಯಾತ್ಮಕ ಗೀತೆ. ಇವುಗಳ ಜೊತೆ ಪುಟ್ಟ ಚರಣಗಳ ಗಾಯನವೂ ಸೇರಿದೆಯಂತೆ. 

ಶಶಾಂಕ್‌ ಶೇಷಗಿರಿ, ರವಿ ಮೂರೂರ್‌ ಅವರ ಕಂಠದಲ್ಲಿ ಈ ಹಾಡುಗಳು ಮೂಡಿಬಂದಿವೆ. ಶ್ರೀರಾಮ್‌ ಕೈಯಲ್ಲಿ ಈಗ ಪ್ರೇಮಕಥೆಯ ‘ಇಷ್ಕ್‌’ ಚಿತ್ರವೂ ಇದೆ. ಅದಕ್ಕೂ ಸಂಯೋಜಿಸುವ ಕೆಲಸ ಸಾಗಿದೆ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು