ಬ್ರೇಕ್ ಅಪ್‌ಗಳ ಬಗ್ಗೆ ಪ್ರಶ್ನಿಸಿದವರಿಗೆ ಶ್ರುತಿ ಹಾಸನ್ ನೀಡಿದ ಉತ್ತರವೇನು?

ಬೆಂಗಳೂರು: ಬ್ರೇಕ್ ಅಪ್‌ಗಳ ಕುರಿತು ಪ್ರಶ್ನಿಸಿದ ವ್ಯಕ್ತಿಗೆ ನಟಿ ಶ್ರುತಿ ಹಾಸನ್ ಅವರು ಕುತೂಹಲಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’ ಕಾರ್ಯಕ್ರಮದಲ್ಲಿ ಶ್ರುತಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ‘ನಿಮ್ಮ ಜೀವನದಲ್ಲಿ ಎಷ್ಟು ಬ್ರೇಕ್ ಅಪ್‌ಗಳಾಗಿವೆ?‘ ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ಶ್ರುತಿ ಹಾಸನ್, ‘ನಿಮಗೆ ಎಷ್ಟು ಗರ್ಲ್‌ಫ್ರೆಂಡ್‌ಗಳಿದ್ದರು? ಯಾರೊಬ್ಬರೂ ಇರಲಿಲ್ಲ ಅಥವಾ ಹಾಫ್ ಗರ್ಲ್ಫ್ರೆಂಡ್ ಇದ್ದಿರಬಹುದು ಎಂಬುದಾಗಿ ನಾನು ಊಹಿಸಿದ್ದೇನೆ’ ಎಂದು ಕುಹಕವಾಡಿದ್ದಾರೆ.
ಸದ್ಯ ಶ್ರುತಿ ಅವರು ಸಂತಾನು ಹಜಾರಿಕ ಜೊತೆ ಡೇಟಿಂಗ್‌ನಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.