ಬುಧವಾರ, ಸೆಪ್ಟೆಂಬರ್ 29, 2021
20 °C

ಆಹಾರ, ಸೆಕ್ಸ್‌ ಬಗ್ಗೆ ನಟಿ ಶ್ರುತಿ ಹಾಸನ್‌ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

’ನಾವು ಆಹಾರ ಇಲ್ಲದಿದ್ದರೇ ಬದುಕಲು ಸಾಧ್ಯವಿಲ್ಲ, ಆದರೆ ಸೆಕ್ಸ್‌ ಮಾಡದಿದ್ದರೂ ಬದುಕಬಹುದು. ಹೀಗೆ ಹೇಳಿದವರು ಬಹು ಭಾಷೆ ತಾರೆ ಶ್ರುತಿ ಹಾಸನ್‌.

ಸದ್ಯ ಪಾನ್‌ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಹಾರ ಮತ್ತು ಸೆಕ್ಸ್‌ ಕುರಿತಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ಫಟಾಫಟ್‌ ಪ್ರಶ್ನೆಗಳ ಸುತ್ತಿನಲ್ಲಿ ಸಂದರ್ಶಕರು ಆಹಾರ ಮತ್ತು ಸೆಕ್ಸ್‌ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ ಶ್ರುತಿ, ಆಹಾರ ಮತ್ತು ಸೆಕ್ಸ್‌ ಅನ್ನು ಹೋಲಿಕೆ ಮಾಡಲು ಸಾಧ್ಯವೆ? ಎಂದು ಮರು ಪ್ರಶ್ನೆ ಹಾಕಿದರು. ಬಳಿಕ, ನಾವು ಆಹಾರ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ, ಆದರೆ ಸೆಕ್ಸ್‌ ಮಾಡದಿದ್ದರೂ ಬದುಕಬಹುದು ಎಂದು ಶ್ರುತಿ ಹೇಳಿದರು.

ಸದ್ಯ ಶ್ರುತಿ ಸಲಾರ್ ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಎದುರು ನಟಿಸುತ್ತಿದ್ದಾರೆ. ಇತ್ತೀಚೆಗೆ ವಕೀಲ್‌ ಸಾಬ್‌ ಸಿನಿಮಾದಲ್ಲಿ ಶ್ರುತಿ ನಟಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು