ಸೋಮವಾರ, ಮಾರ್ಚ್ 30, 2020
19 °C

'ವಕೀಲ್‌ ಸಾಬ್‌' ಪವನ್‌ ಕಲ್ಯಾಣ್‌ಗೆ ಶ್ರುತಿ ಹಾಸನ್‌ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಪವನ್‌ ಕಲ್ಯಾಣ್‌ ಅವರದ್ದು ಎರಡು ದೋಣಿಯ ಪಯಣ. ಅವರಿಗೆ ರಾಜಕೀಯದ ಮೇಲೆ ಕಡುಮೋಹ. ಹಾಗೆಂದು ಅವರು ಸಿನಿಮಾದ ಸೆಳೆತದಿಂದಲೂ ದೂರ ಸರಿದಿಲ್ಲ. ರಾಜಕಾರಣದ ಬಿಡುವಿನ ನಡುವೆಯೇ ಅವರು ‘ವಕೀಲ್‌ ಸಾಬ್’ ಸಿನಿಮಾ ಮೂಲಕ ಮತ್ತೆ ಬಣ್ಣದಲೋಕದ ಹಾದಿಗೆ ಹೊರಳಿದ್ದಾರೆ. ಸದ್ಯಕ್ಕೆ ಕೊರೊನಾ ಸೋಂಕಿನ ಭೀತಿಯಿಂದಾಗಿ ಈ ಚಿತ್ರದ ಶೂಟಿಂಗ್‌ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದು ಹಿಂದಿಯ ‘ಪಿಂಕ್‌’ ಚಿತ್ರದ ತೆಲುಗು ರಿಮೇಕ್.

ಇದನ್ನೂ ಓದಿ... First Look | 'ವಕೀಲ್ ಸಾಬ್‌' ಪವನ್‌ ಕಲ್ಯಾಣ್‌ ಮತ್ತೆ ಕಮ್‌ಬ್ಯಾಕ್‌

ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ವೇಣು ಶ್ರೀರಾಮ್‌. ಈ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು. ಶ್ರುತಿ ಹಾಸನ್, ಇಲಿಯಾನಾ, ಲಾವಣ್ಯಾ ತ್ರಿಪಾಠಿ ಅವರು ಪವನ್‌ ಕಲ್ಯಾಣ್‌ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು. ಕೊನೆಗೆ, ಚಿತ್ರತಂಡ ಶ್ರುತಿ ಹಾಸನ್‌ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ. 

ಇದನ್ನೂ ಓದಿ... ನಟನೆಗೆ ಮರಳಿದ ಶ್ರುತಿ ಹಾಸನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು