ಶುಕ್ರವಾರ, ಮೇ 27, 2022
21 °C

‘ಮದಗಜ’ನ ಘೀಳಿಗೆ ಸಿನಿಪ್ರಿಯಾ ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಶ್ರೀಮುರಳಿ ‘ಭರಾಟೆ’ಯ ನಂತರ ಮತ್ತೊಂದು ಅದ್ಧೂರಿ ಚಿತ್ರ ‘ಮದಗಜ’ದ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಮುರಳಿ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿರುವ ಈ ಚಿತ್ರದ ಕೂತೂಹಲಕಾರಿ ಫಸ್ಟ್‌ಲುಕ್‌ ಟೀಸರ್‌ವೊಂದು ಈಗ ಹೊರಬಿದ್ದಿದೆ. ಈ ಟೀಸರ್‌ ಅನ್ನು ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಬಿಡುಗಡೆ ಮಾಡಿದ್ದು, ಯ್ಯೂಟೂಬ್‌, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಪುಟಗಳಲ್ಲಿ ಹವಾ ಎಬ್ಬಿಸುತ್ತಿದೆ. 1.42 ನಿಮಿಷಗಳ ಅವಧಿಯ ಈ ಟೀಸರ್‌ನಲ್ಲಿರುವ ಶ್ರೀಮುರಳಿಯವರ ಲುಕ್‌ ಮತ್ತು ಖಡಕ್‌ ಡೈಲಾಗ್‌ಗಳಿಗೆ ಸಿನಿಪ್ರಿಯರು ಅಕ್ಷರಶಃ ಪಿಧಾ ಆಗಿದ್ದಾರೆ. ಖಡಕ್‌ ಡೈಲಾಗಳ ಝಲಕ್‌ ಹೀಗಿದೆ;

ಈ ಪಾಪದ ಪ್ರಪಂಚದಲ್ಲಿ ನಮ್ಮ ಪ್ರಯಾಣ

ಕೊಚ್ಚೆಯಲ್ಲಿ ಹವಾಯಿ ಚಪ್ಪಲಿ ಹಾಕೊಂಡು ನಡೆದಂಗೆ

ನಾವು ಸರಿಯಾಗಿ ನಡೆದ್ರೂ ಅದು ನಮ್ಮ ಮೇಲೆ ಹಾರದೇ ಇರಲ್ಲ

ಪಂದ್ಯ ಗೆಲ್ಲಬೇಕು ಅನ್ನೋನು ಪಾಯಿಂಟ್‌ಗೋಸ್ಕರ ಹೊಡಿತಾನೆ

ಪಟ್ಟ ಗೆಲ್ಲಬೇಕು ಅನ್ನೋನು ಪಾಯಿಂಟ್‌ಲ್ಲೇ ಹೊಡಿತಾನೆ.

–ಇದು ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿ ಒಂದೂವರೆ ತಾಸು ಕಳೆಯುವುದರೊಳಗೆ ದಾಖಲೆಯ ಸಂಖ್ಯೆಯಲ್ಲಿ ಅಂದರೆ ಸುಮಾರು 2 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಟಿತ್ತು. ಇದು ಚಿತ್ರತಂಡದ ಆತ್ಮವಿಶ್ವಾಸ ಮತ್ತು ನಿರೀಕ್ಷೆಗಳನ್ನು ಸಹಜವಾಗಿಯೇ ಹೆಚ್ಚುವಂತೆ ಮಾಡಿದೆ.

ಫೆಬ್ರುವರಿಯಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದ್ದು, ಶಿವರಾತ್ರಿಯಂದೇ ಐದು ಸಾವಿರಕ್ಕೂ ಹೆಚ್ಚು ಅಘೋರಿಗಳ ನಡುವೆ ‘ಮದಗಜ’ನ ಶೂಟಿಂಗ್‌ ಶುರುವಾಗಿತ್ತು. ವಾರಣಾಸಿ, ಮೈಸೂರು, ಬೆಂಗಳೂರಿನಲ್ಲಿ ಮೊದಲ ಮತ್ತು ಎರಡನೇ ಹಂತದ ಚಿತ್ರೀಕರಣ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಡಿಸೆಂಬರ್‌ ಮೊದಲ ವಾರದಲ್ಲಿ ಬೆಂಗಳೂರಿನ ಮಿನರ್ವ ಮಿಲ್‌ ಮತ್ತು ಎಚ್ಎಂಟಿ ಕಾರ್ಖಾನೆ ಜಾಗದಲ್ಲಿ ನಡೆಯಿತು.

ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್‌, ಪ್ರಮುಖ ಪಾತ್ರಗಳಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು, ಹಾಸ್ಯ ನಟರಾದ ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌.ಪೇಟೆ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ನವೀನ್‌ ಕುಮಾರ್‌, ಸಂಗೀತ ನಿರ್ದೇಶನ ರವಿ ಬಸ್ರೂರು. ಕಲಾ ನಿರ್ದೇಶನ ಮೋಹನ್‌ ಬಿ.ಕೆರೆ ಅವರದು. ಉಮಾಪತಿ ಶ್ರೀನಿವಾಸಗೌಡ ಬಂಡವಾಳ ಹೂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು