ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ ಪ್ರಕಟಿಸಿದ ಸೋನಾಲಿ ಬೇಂದ್ರೆ

Last Updated 11 ಆಗಸ್ಟ್ 2018, 10:03 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಅವರು ಮಗ ರಣವೀರ್‌ನ 13ನೇ ಹುಟ್ಟುಹಬ್ಬದ ಅಂಗವಾಗಿ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಬರಹ ಮತ್ತು ವಿಡಿಯೊವನ್ನು ಪ್ರಕಟಿಸಿದ್ದಾರೆ.

ಮೆಟಸ್ಟ್ಯಾಟಿಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸೋನಾಲಿ, ಕಳೆದ ಹಲವು ದಿನಗಳಿಂದ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ರಣವೀರ್‌! ನನ್ನ ಸೂರ್ಯ, ಚಂದ್ರ, ನಕ್ಷತ್ರಗಳು, ಆಕಾಶ... ಸರಿ, ಬಹುಶಃ ನಾನು ಸ್ವಲ್ಪ ಭಾವಾತಿರೇಕಗೊಂಡಿದ್ದೇನೆ. ಆದರೆ ಇದು ನಿನ್ನ 13ನೇ ಹುಟ್ಟುಹಬ್ಬ. ವಾಹ್ !, ಇದೀಗ ನೀನು ಹದಿಹರೆಯದವ. ನಿನ್ನ ವಿವೇಕ, ಹಾಸ್ಯ, ಶಕ್ತಿ, ದಯೆ, ತುಂಟಾಟಗಳ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಿನ್ನಿಂದ ನಾನು ಎಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಜನ್ಮದಿನದ ಶುಭಾಶಯಗಳು. ನಾವು ಒಟ್ಟಾಗಿ ಇಲ್ಲದಿರುವ ಮೊದಲ ಸಂದರ್ಭವಿದು. ನಾನು ನಿನ್ನನ್ನು ತುಂಬ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಾನುನಿನ್ನನ್ನುಸದಾಕಾಲ ಅತಿಯಾಗಿ ಪ್ರೀತಿಸುವೆ’ ಎಂದು ಬರೆದಿದ್ದಾರೆ.

ಈಚೆಗೆ, ‘ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ನನಗೆ ಧೈರ್ಯ’ ಎಂದು ಸೋನಾಲಿ ಹೇಳಿದ್ದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT