ಬಾಲಿವುಡ್ ನಟ ಅನಿಲ್ ಕಪೂರ್ ಅವರ ಮುದ್ದಿನ ಮಗಳು ಸೋನಂ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2007ರಲ್ಲಿ ಚಿತ್ರರಂಗವನ್ನು ಪ್ರವೇಶ ಮಾಡಿದ ಸೋನಂ ಕಪೂರ್ ತಮ್ಮ ನಟನೆ ಮೂಲಕವೇ ಖ್ಯಾತಿ ಗಳಿಸಿದರು.
.34 ವರ್ಷಗಳ ಬಳಿಕ ಶ್ರೀದೇವಿ, ಅನಿಲ್ ಕಪೂರ್ ಅಭಿನಯದ 'ಲಮ್ಹೆ' ಚಿತ್ರ ಮರು ಬಿಡುಗಡೆ.ಬದುಕಿದ್ದಾಗಲೇ ಧರ್ಮೇಂದ್ರರಿಗೆ ಪದ್ಮವಿಭೂಷಣ ಬರಬೇಕಿತ್ತು; ಅನಿಲ್ ಶರ್ಮಾ ಬೇಸರ.
ಆದರೆ, 2017ರಲ್ಲಿ ಏಕಾಏಕಿ ಚಿತ್ರರಂಗದಿಂದ ದೂರವಾದ ಸೋನಂ ಕಪೂರ್ 2018ರ ಮೇ 8ರಂದು ತಾವು ಪ್ರೀತಿಸಿದ ಹುಡುಗ ಆನಂದ್ ಅಹುಜಾ ಜೊತೆಗೆ ಮದುವೆಯಾದರು. ಮದುವೆಯಾಗಿ ನಾಲ್ಕು ವರ್ಷಗಳ ನಂತರ 2022ರಲ್ಲಿ ಆಗಸ್ಟ್ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮುದ್ದಾದ ಮಗನಿಗೆ ವಾಯು ಎಂದು ನಾಮಕರಣವನ್ನು ಮಾಡಿದ್ದರು.

ಈಗ ಸೋನಂ ಕಪೂರ್ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಸದ್ಯ ತಮ್ಮ 40ನೇ ವರ್ಷದಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸೋನಂ ಕಪೂರ್ ಅವರಿಗೆ ಕುಟುಂಬಸ್ಥರು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

ನಿನ್ನೆ (ಫೆ.8) ನಟಿಯ ಸೀಮಂತ ಶಾಸ್ತ್ರ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಸೋನಂ ತಂದೆ ಅನಿಲ್ ಕಪೂರ್, ಅರ್ಜುನ್ ಕಪೂರ್, ಅಂಶುಲಾ ಕಪೂರ್, ಖುಷಿ ಕಪೂರ್, ಮಹಿಪ್ ಕಪೂರ್, ಸೇರಿದಂತೆ ಇಡೀ ಕಪೂರ್ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಹಿರಿಯ ನಟ ಅನುಪಮ್ ಖೇರ್ ಕೂಡ ಕಾರ್ಯಕ್ರಮಕ್ಕೆ ಬಂದು ದಂಪತಿಗೆ ಆಶೀರ್ವದಿಸಿದರು. ಕರೀನಾ ಕಪೂರ್, ಭೂಮಿ ಪೆಡ್ನೇಕರ್, ಅಲೇಖಾ ಅಡ್ವಾಣಿ, ಮಸಾಬಾ ಗುಪ್ತಾ, ಶಬಾನಾ ಅಜ್ಮಿ, ಡಿಸೈನರ್ ಸಂದೀಪ್ ಖೋಸ್ಲಾ, ಹೀಗೆ ಬಾಲಿವುಡ್ನ ಹಲವು ತಾರೆಯರು ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಸೋನಂ ಕಪೂರ್ ಅವರ ಆಪ್ತ ಸ್ನೇಹಿತೆಯಾಗಿರುವ ರಾಣಾ ದಗ್ಗುಬಾಟಿ ಅವರ ಪತ್ನಿ ಮಿಹೀಕಾ ಬಜಾಜ್ ಕೂಡ ಸ್ನೇಹಿತೆಯ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ಸದ್ಯ ನಟಿ ಸೀಮಂತದ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದೇ ಫೋಟೊಗಳನ್ನು ನೋಡಿದ ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.