ಕೋವಿಡ್–19 ಪರಿಣಾಮ ದೇಶದಾದ್ಯಂತ ಕಳೆದ ಮಾರ್ಚ್‌ನಿಂದ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದೆ. ಇದರಿಂದ ಬಿಗ್ ಬಜೆಟ್ ಸಿನಿಮಾಗಳು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿವೆ. ಈ ನಡುವೆಯೂ ‘ಸೂರ್ಯವಂಶಿ’ ಮತ್ತು ‘83’ ಸಿನಿಮಾಗಳಿಗೆ ಬಂಡವಾಳ ಹೂಡಿರುವ ರಿಲೆಯನ್ಸ್ ಎಂಟರ್‌ಟೈನ್‌ಮೆಂಟ್ಸ್ ಥಿಯೇಟರ್‌ನಲ್ಲಿಯೇ ಈ ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮೂಲಕ ಅಧಿಕೃತವಾಗಿ ತಿಳಿಸಿದೆ.

ರೋಹಿತ್ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಎಪಿಸಿ ವೀರ್ ಸೂರ್ಯವಂಶಿ. ಉಗ್ರ ನಿಗ್ರಹ ಪಡೆಯ ಮುಖ್ಯಸ್ಥನ ಪಾತ್ರವದು. ಉಗ್ರರ ದಾಳಿಯಿಂದ ಮುಂಬೈ ಅನ್ನು ರಕ್ಷಿಸುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರಿಗೆ ಕತ್ರೀನಾ ಕೈಫ್ ಜೋಡಿ.

ಕಬೀರ್ ಖಾನ್ ನಿರ್ದೇಶನದ ‘83’ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನಚರಿತ್ರೆ ಕುರಿತ ಚಿತ್ರ. ಕಪಿಲ್ ದೇವ್ ಪಾತ್ರದಲ್ಲಿ ನಟ ರಣವೀರ್ ಸಿಂಗ್ ನಟಿಸಿದ್ದಾರೆ. ಕಪಿಲ್ ಅವರ ಪತ್ನಿಯ ಪಾತ್ರಕ್ಕೆ ಬಣ್ಣ ಹಚ್ಚಿರುವುದು ದೀಪಿಕಾ ಪಡುಕೋಣೆ. ಕಪಿಲ್ ದೇವ್ ಅವರ ವೃತ್ತಿಬದುಕಿನ ಏಳುಬೀಳುಗಳ ಮೇಲೂ ಈ ಸಿನಿಮಾ ಬೆಳಕು ಚೆಲ್ಲಲಿದೆಯಂತೆ.

ಇತ್ತೀಚೆಗೆ ರಿಲೆಯನ್ಸ್ ಎಂಟರ್‌ಟೈನ್‌ಮೆಂಟ್ಸ್‌ನ ಸಿಇಒ ಶಿಬಾಶಿಶ್ ಸರ್ಕಾರ್, ‘ಈ ಎರಡೂ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.