ಸೋಮವಾರ, ಜೂನ್ 21, 2021
30 °C

‘ದಿ ಪೈಂಟರ್’ಗೆ ಶ್ರೀಮುರಳಿಯ ಟಚ್‌ ಅಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ‘ದಿ ಫೈಂಟರ್‌’ ಚಿತ್ರವನ್ನು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇದೇ 14ರಂದು ಬಿಡುಗಡೆ ಮಾಡಲಿದ್ದು, ಚಿತ್ರತಂಡಕ್ಕೆ ಸ್ಟಾರ್ ನಟ ಸಾಥ್‌ ನೀಡಿದ್ದಾರೆ.

ಲಾಕ್ ಡೌನ್ ವೇಳೆ ವಿಭಿನ್ನ ತಾಣಗಳಲ್ಲಿ ಚಿತ್ರೀಕರಿಸಿರುವ ‘ದಿ ಪೈಂಟರ್’ ಚಿತ್ರ ಇದೇ 14ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ಆಲ್‌ ಟೈಮ್ ಥಿಯೇಟರ್) ಮೂಲಕ ಬಿಡುಗಡೆಯಾಗಲಿದೆ. ಹೊಸಬರ ಚಿತ್ರ ಹಾಗೂ ವಿಷಯ ಪ್ರಧಾನ ಚಿತ್ರಗಳನ್ನು ಸದಾ ಬೆಂಬಲಿಸುವ ನಟ ಶ್ರೀಮುರಳಿ, ಈ ಬಾರಿ ವೆಂಕಟ ಭಾರದ್ವಾಜ್ ನಿರ್ದೇಶಿಸಿ, ನಟಿಸಿರುವ ‘ದಿ ಪೈಂಟರ್’ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಚಿತ್ರದ ಟ್ರೈಲರ್ ಶುಕ್ರವಾರ ಸಂಜೆ 5 ಗಂಟೆಗೆ ಲಹರಿ ಯೂಟ್ಯೂಬ್ ಚಾನೆಲ್‌ ಮೂಲಕ ಬಿಡುಗಡೆ ಯಾಗುತ್ತಿದೆ.

‘ದಿ ಪೈಂಟರ್’ ಚಿತ್ರ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಕಥೆಯ ಚಿತ್ರ. ಕೊರೊನಾ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಮತ್ತೆ ಕೆಲವರು ಹೇಗೆಲ್ಲಾ ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಕಥೆ ಹೇಳಲಿದೆ. 

shreyasET App ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ₹50 ಪಾವತಿಸಿ ಈ ಚಿತ್ರ ವೀಕ್ಷಿಸಬಹುದು. ಚಿತ್ರದ ಗಳಿಕೆಯಲ್ಲಿ ಶೇ 20ರಷ್ಟು ಹಣವನ್ನು ಕನ್ನಡ ಚಿತ್ರ ಕಾರ್ಮಿಕರ ನೆರವಿಗೆ ದೇಣಿಗೆ ನೀಡಿವುದಾಗಿ ಚಿತ್ರತಂಡ ಈ ಹಿಂದೆಯೇ ಪ್ರಕಟಿಸಿದೆ.

ಕೆ.ಕೆ. ಕಂಬೈನ್ಸ್ ಹಾಗೂ ಅಮೃತ ಫಿಲಂ ಸೆಂಟರ್ ಮೂಲಕ ಚಿತ್ರ ನಿರ್ಮಿಸಲಾಗಿದೆ. ತಾರಾಗಣದಲ್ಲಿ ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಭಾಷಾ, ಶಿನವ್ ಕಬೀರ್ ಸೋಮಯಾಜಿ, ಶಮೀಕ್, ಉಮಾ, ಮಧುರ, ಅಜಯ್ ಲಾರೆನ್ಸ್ ಶಮಾ, ವೈಷ್ಣವಿ, ವೆಂಕಟ್ ಶಾಸ್ತ್ರಿ, ಮನೋಜ್, ಕಿರಣ್, ಮಿಥುನ್ ಮತ್ತು ಸಂಜಯ್ ಇದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯು ವೆಂಕಟ್ ಭಾರದ್ವಾಜ್ ಅವರದೇ. ಛಾಯಾಗ್ರಹಣ ಶಮೀಕ್, ಸಂಜಯ್, ಮಣಿ, ವೆಂಕಟೇಶ್ ಶಾಸ್ತ್ರಿ, ಕಬೀರ್ ಸೋಮಯಾಜಿ, ಸಂಕಲನ ಚಂದನ್ ಪಿ., ಸಂಗೀತ ಲವ್ ಪ್ರಾಣ್ ಮೆಹ್ತಾ ಅವರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು