ಬೆಂಗಳೂರು: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು RRR ನಂತರ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ. #SSMB ಎಂದು ತಾತ್ಕಾಲಿಕವಾಗಿ ಹೆಸರಿಡಲಾದ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಾರೆ ಎನ್ನಲಾಗಿದೆ.

ಈಗಾಗಲೇ ಈ ಚಿತ್ರದ ಕಥೆ–ಚಿತ್ರಕಥೆ ಸಿದ್ದವಾಗಿದ್ದು ರಾಜಮೌಳಿ ಅವರು ಇತ್ತೀಚೆಗೆ ಚಿತ್ರದ ಮುಹೂರ್ತವನ್ನೂ ನೆರವೇರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸೆಟ್ ಒಂದಕ್ಕೆ ಮಹೇಶ್ ಬಾಬು ಹೋಗುತ್ತಿದ್ದ ವಿಡಿಯೊಗಳು ಹರಿದಾಡಿದ್ದವು.

ಆದರೆ, ಅಂತಹ ಯಾವುದೇ ಕಾರ್ಯಕ್ರಮ ನಡೆದಿಲ್ಲ ಎಂದು ರಾಜಮೌಳಿ ಕಡೆಯವರು ತಿಳಿಸಿದ್ದಾರೆ ಎಂದು ದಿ ರಿಪಬ್ಲಿಕ್ ವೆಬ್ಸೈಟ್ ವರದಿ ಮಾಡಿದೆ.

ಏತನ್ಮಧ್ಯೆ ರಾಜಮೌಳಿ ಹಾಗೂ ಅವರ ತಂಡದವರು #SSMB ಗಾಗಿ ಆಫ್ರಿಕಾದ ಕಾಡುಗಳನ್ನು ಸುತ್ತುತ್ತಿದ್ದಾರೆ. ಅಲ್ಲಿಯೇ ಚಿತ್ರೀಕರಣ ಮಾಡುವ ಯೋಜನೆ ಇದೆ ಎನ್ನಲಾಗಿದೆ.

ಸಾವಿರ ಕೋಟಿಗೂ ಅಧಿಕ ಬಂಡವಾಳ ಹಾಕಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಡಿಸ್ನಿ ಹಾಗೂ ಸೋನಿ ಕಂಪನಿಗಳ ಜೊತೆ ಮಾತುಕತೆ ನಡೆದಿದೆ. ಇದೊಂದು ಆಕ್ಷನ್, ಅಡ್ವೆಂಚರ್ ಸಿನಿಮಾ ಆಗಿರಲಿದೆ ಎಂದು ವರದಿಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.