ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲ್‌ ಸೆಂಟರ್‌’ನಲ್ಲಿ ಸುನಿಲ್‌ ಶೆಟ್ಟಿ

Last Updated 15 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನೈಜ ಘಟನೆ ಆಧಾರಿತ ಹಾಲಿವುಡ್‌ ಸಿನಿಮಾ ‘ಕಾಲ್‌ ಸೆಂಟರ್‌’ನಲ್ಲಿ ನಟ ಸುನಿಲ್‌ ಶೆಟ್ಟಿ ಅಭಿನಯಿಸಲಿದ್ದಾರೆ.

ಅಮೆರಿಕದ ಜಾಫ್ರಿ ಚಿನ್‌ ನಿರ್ದೇಶನದ ಈ ಸಿನಿಮಾದ ಕೆಲವು ಭಾಗದ ಚಿತ್ತೀಕರಣ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿತ್ತು.

ಕಾಲ್‌ಸೆಂಟರ್‌ ಹಗರಣದಲ್ಲಿ ಸಿಲುಕಿದ್ದ ಭಾರತದ ಪೊಲೀಸ್ ಅಧಿಕಾರಿಯೊಬ್ಬರ ನೈಜ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಭಾರತ ಹಾಗೂ ಅಮೆರಿಕದ ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕಾಲ್‌ ಸೆಂಟರ್‌ ಪ್ರಕರಣದ ತನಿಖೆ ವೇಳೆ ಅಮೆರಿಕದ ಏಜೆನ್ಸಿಗಳನ್ನು ಕೂಡ ಬಳಸಿಕೊಳ್ಳಲಾಗಿತ್ತು. ಹಿಂದಿ ಹಾಗೂ ತೆಲುಗು ಭಾಷೆಗೂ ಈ ಸಿನಿಮಾವನ್ನು ರಿಮೇಕ್ ಮಾಡುವ ಯೋಜನೆ ಇದೆ ಎಂದು ತಂಡ ಹೇಳಿದೆ.

ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಲಿರುವ ಸುನಿಲ್ ಶೆಟ್ಟಿ, ಹೈದರಾಬಾದ್‌ನಲ್ಲಿ ಆರೋಪಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯವೊಂದರ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT