ಸೋಮವಾರ, ಡಿಸೆಂಬರ್ 6, 2021
25 °C

ಥಿಯೇಟರ್‌ನಲ್ಲಿ ಬಿಡುಗಡೆಯಾದ ಇಪ್ಪತ್ತೇ ದಿನಗಳಲ್ಲಿ ಒಟಿಟಿಗೆ 'ಅಣ್ಣಾತೆ'

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ 'ಅಣ್ಣಾತೆ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 20 ದಿನಗಳಲ್ಲೇ ಒಟಿಟಿಯಲ್ಲಿ ಲಭ್ಯವಾಗುತ್ತಿದೆ. ನವೆಂಬರ್‌ 4ಕ್ಕೆ 'ಅಣ್ಣಾತೆ' ಪಂಚಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.

ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಲಭ್ಯವಿದೆ.

ರಜನಿಕಾಂತ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವಿದ್ದು, ರಜನಿ ಸಿನಿಮಾ ಎಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ ಇದ್ದಂತೆ. ಇದೀಗ ಥಿಯೇಟರ್‌ಗಳಿಂದ ಒಟಿಟಿಗೆ ಬಂದಿದ್ದರಿಂದ ಒಂದಷ್ಟು ಅಭಿಮಾನಿಗಳು ಖುಷಿಯಾಗಿದ್ದಾರೆ. ಕೆಲವರು ಇದು ಚಿತ್ರದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್‌ ಸೇರಿದಂತೆ ದೊಡ್ಡ ತಾರಾಬಳಗವಿದೆ.

ತೆಲುಗಿನಲ್ಲಿ ಇದೇ ಸಿನಿಮಾ ಪೆದ್ದಣ್ಣ ಹೆಸರಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಸುಮಾರು 1000 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಅಂತರರಾಷ್ಟ್ರೀಯವಾಗಿ 1800 ಚಿತ್ರಮಂದಿರಗಳಲ್ಲಿ ಅಣ್ಣಾತೆ ಬಿಡುಗಡೆಯಾಗುವ ಮೂಲಕ ವಿಶೇಷವಾಗಿ ಗಮನ ಸೆಳೆದಿತ್ತು. ಅಮೆರಿಕದ 650 ಚಿತ್ರಮಂದಿರಗಳಲ್ಲಿ, ಮಲೇಷಿಯಾ ಹಾಗೂ ಶ್ರೀಲಂಕಾದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಈ ಸಿನಿಮಾ 1,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೂಲಗಳ ಪ್ರಕಾರ ಒಟ್ಟಾರೆ ಈ ಸಿನಿಮಾ ವಿಶ್ವದಾದ್ಯಂತ 4,300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ನವೆಂಬರ್‌ 5ಕ್ಕೆ ಬಿಡುಗಡೆಯಾಗಿದ್ದ ಅಕ್ಷಯ್‌ ಕುಮಾರ್‌ ಅಭಿನಯದ ಸೂರ್ಯವಂಶಿ ಚಿತ್ರಮಂದಿರದಲ್ಲೇ ಓಡುತ್ತಿದ್ದು, ₹150 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ನವೆಂಬರ್‌ 12ಕ್ಕೆ ತೆರೆ ಕಂಡ ದುಲ್ಕರ್‌ ಸಲ್ಮಾನ್‌ ಮುಖ್ಯಭೂಮಿಕೆಯ ಕುರುಪ್‌ ಕೂಡ ಸಿನಿಮಾ ಥಿಯೇಟರ್‌ನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು