ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳದಲ್ಲಿ ತಯಾರಾಗಿದೆ ಸುಶಾಂತ್ ಮೇಣದ ಪ್ರತಿಮೆ

Published : 20 ಸೆಪ್ಟೆಂಬರ್ 2020, 10:24 IST
ಫಾಲೋ ಮಾಡಿ
Comments

ದೂರದಿಂದ ನಿಂತು ನೋಡಿದರೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ನಿಂತು ನಗುತ್ತಿರುವಂತೆ ಕಾಣುವ ಮೇಣದ ಪ್ರತಿಮೆಯೊಂದನ್ನು ರಚಿಸಿದ್ದಾರೆ ಪಶ್ಚಿಮ ಬಂಗಾಳದ ಸುಶಾಂತೋ ರಾಯ್‌. ಈ ಅಪರೂಪದ ಮೇಣದ ಕಲಾವಿದ ಸುಶಾಂತ್ ಅವರ ಸುಂದರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ದಿವಂಗತ ನಟನಿಗೆ ಗೌರವ ಸಲ್ಲಿಸಿದ್ದಾರೆ.

ಪಶ್ಚಿಮ ಬಂಗಾಳದಬರ್ದ್ವಾನ್ ಜಿಲ್ಲೆಯಲ್ಲಿನ ತಮ್ಮ ಸ್ಟುಡಿಯೊದಲ್ಲಿ ಈ ಪ್ರತಿಮೆಯನ್ನು ಇರಿಸಿದ್ದಾರೆ ರಾಯ್‌. ಪ್ರತಿಮೆಯು 22ಕೆಜಿ ತೂಕವಿದ್ದು 5 ಅಡಿ 10 ಇಂಚು ಎತ್ತರವಿದೆ. ಈ ಪ್ರತಿಮೆಯನ್ನು ಪೂರ್ಣಗೊಳಿಸಲು ಒಂದೂವರೆ ತಿಂಗಳು ತೆಗೆದುಕೊಂಡಿದ್ದಾರಂತೆ ಸುಶಾಂತೋ.

ಈ ಕಲಾವಿದೆ ಹಿಂದೆ ಅಮಿತಾಬ್ ಬಚ್ಚನ್‌ ಸೇರಿದಂತೆ ವಿವಿಧ ಕ್ಷೇತ್ರದ ಅನೇಕ ಗಣ್ಯರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದರು.

‘ನಾನು ಒಂದಲ್ಲ ಒಂದು ರೂಪದಲ್ಲಿ ನನಗೆ ಭಾವನಾತ್ಮಕವಾಗಿ ಮೆಚ್ಚುಗೆಯಾದ ವ್ಯಕ್ತಿಗಳ ಪ್ರತಿಮೆಗಳನ್ನು ರಚಿಸುತ್ತೇನೆ. ನಾನು ಪ್ರತಿಮೆ ರಚಿಸಿದ ಪ್ರತಿಯೊಬ್ಬರು ಅವರ ಜೀವನ ಹಾಗೂ ಅವರ ಕೆಲಸಗಳಿಂದ ನನಗೆ ಸ್ಫೂರ್ತಿ ನೀಡಿದ್ದಾರೆ. ಅಮಿತಾಬ್‌, ಜ್ಯೋತಿ ಬಸು, ಪ್ರಣವ್ ಮುಖರ್ಜಿ ಅವರ ಪ್ರತಿಮೆಗಳನ್ನು ನಾನು ಮಾಡಿದ್ದೇನೆ’ ಎಂದಿದ್ದಾರೆ ಸುಶಾಂತೋ ರಾಯ್‌.

‘ದಿವಂಗತ ನಟ ಸುಶಾಂತ್ ಸಿಂಗ್ ಅವರ ಪ್ರತಿಮೆಯನ್ನು ಸಹ ಇದೇ ಕಾರಣಕ್ಕಾಗಿ ತಯಾರಿಸಿದ್ದೇನೆ. ಆದರೂ ನಾನು ತಯಾರಿಸಿದ ಈ ಪ್ರತಿಮೆಯನ್ನು ಸುಶಾಂತ್ ಅವರಿಗೆ ತೋರಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಬೇಸರವಾಗುತ್ತಿದೆ. ನಟನಾ ವೃತ್ತಿಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಹಾಗೂ ಹೋರಾಟ ಮುಂದಿನ ಯುವ ಮಹತ್ವಾಕಾಂಕ್ಷಿ ನಟರಿಗೆ ಸ್ಫೂರ್ತಿಯಾಗಬೇಕು’ ಎಂದಿರುವ ಅವರು ಸುಶಾಂತ್ ಪ್ರತಿಮೆಯನ್ನು ತಮ್ಮದೇ ಸಂಗ್ರಹಾಲಯದಲ್ಲಿ ಇಡಲು ನಿರ್ಧರಿಸಿದ್ದಾರೆ.

ಈ ಅನುಭವಿ, ಹಿರಿಯ ಮೇಣದ ಕಲಾವಿದ ತಮ್ಮ ಸಂಪೂರ್ಣ ಉಳಿತಾಯದ ಹಣವನ್ನುಅಸನ್‌ಸೋಲ್‌ನಲ್ಲಿ ಅತ್ಯಾಧುನಿಕ ಖಾಸಗಿ ಸಂಗ್ರಹಾಲಯವನ್ನು ನಿರ್ಮಿಸುವ ಸಲುವಾಗಿ ಖರ್ಚು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT