ಗುರುವಾರ , ಜನವರಿ 27, 2022
21 °C

ಪುತ್ರಿಯರೊಂದಿಗೆ ಸುಶ್ಮಿತಾ ಸೇನ್ ಡ್ಯಾನ್ಸ್: ಮಾಜಿ ಗೆಳೆಯನ ಕಾಮೆಂಟ್ ಹೀಗಿತ್ತು..

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌, ಆರ್ಯ ವೆಬ್‌ಸಿರೀಸ್ ಮೂಲಕ ನಟನೆಯೆಡೆಗೆ ಕಮ್‌ಬ್ಯಾಕ್ ಮಾಡಿದ ಅವರು ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ. ನಟಿ ಆಗಾಗ್ಗೆ ತನ್ನ ಮಕ್ಕಳೊಂದಿಗೆ ಸುಂದರವಾದ ಫೋಟೊಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಸುಶ್ಮಿತಾ ಸೇನ್, ಪುತ್ರಿಯರಾದ ರೆನೀ ಮತ್ತು ಅಲಿಸಾ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕ್ಯಾಶುಯಲ್ ವೇರ್ ಧರಿಸಿರುವ ಮೂವರು ನೃತ್ಯ ಮಾಡುವುದು, ನಗುವುದು ಮತ್ತು ಹಾಡುವುದು ಕಂಡುಬಂದಿದೆ.

'ನೀವು ವರ್ಕ್‌ಔಟ್ ಮಾಡುವ ಮನಸ್ಥಿತಿಯಲ್ಲಿಲ್ಲದಿದ್ದರೆ, ಪರವಾಗಿಲ್ಲ, ಡ್ಯಾನ್ಸ್ ಮಾಡಬಹುದು. ನಿಮ್ಮ ಹೃದಯದ ಮಾತನ್ನು ಆಲಿಸಿ... ಬಡಿತವನ್ನು ಅನುಸರಿಸಿ ಮತ್ತು ನಿಮ್ಮ ಸ್ವಂತ ಲಯಕ್ಕೆ ನೀವು ಕುಣಿಯಿರಿ' ಎಂದು ಬರೆದುಕೊಂಡಿದ್ದಾರೆ.

ರೆನೀ ಮತ್ತು ಅಲಿಸಾ ಅವರಿಗೆ ಟ್ಯಾಗ್ ಮಾಡಿರುವ ಅವರು, 'ಅಮ್ಮನ ಹೆಮ್ಮೆ. ಯಾವಾಗಲೂ ನನ್ನನ್ನು ಖುಷಿಯಾಗಿರುವಂತೆ ಇಟ್ಟುಕೊಂಡಿದ್ದಕ್ಕಾಗಿ ಧನ್ಯವಾದಗಳು! ಐ ಲವ್ ಯೂ ಗೈಸ್' ಎಂದಿದ್ದಾರೆ.

ಈ ವಿಡಿಯೊಗೆ ಸುಶ್ಮಿತಾ ಸೇನ್ ಅವರ ಮಾಜಿ ಗೆಳೆಯ ರೋಶ್ಮನ್ ಶಾಲ್ ಕೂಡ ಕಾಮೆಂಟ್ ಮಾಡಿದ್ದು, ಸುಶ್ಮಿತಾ ಅವರ ಕಿರಿಯ ಮಗಳನ್ನು ಹುರಿದುಂಬಿಸುತ್ತಾ, ಹೃದಯದ ಕಣ್ಣಿನ ಎಮೋಜಿಗಳೊಂದಿಗೆ 'ಅಲಿಸಾ ಅಲಿಸಾಹ್ ಆಲ್ ದಿ ವೇ' ಎಂದು ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು