ಮಂಗಳವಾರ, ಆಗಸ್ಟ್ 20, 2019
21 °C

ಮಾಲಿವುಡ್‌ಗೆ ತಮನ್ನಾ

Published:
Updated:
Prajavani

ನಟಿ ತಮನ್ನಾ ಭಾಟಿಯಾ ಮಾಲಿವುಡ್‌ಗೆ ಸದ್ಯದಲ್ಲೇ ಕಾಲಿಡಲಿದ್ದಾರೆ.

ಬಾಲಿವುಡ್‌, ಟಾಲಿವುಡ್‌ ಸಿನಿಮಾಗಳ ಮೂಲಕ ಹೆಚ್ಚು ಪರಿಚಿತವಾಗಿರುವ ಈ ನಟಿ, ಮಲಯಾಳಂ ಭಾಷೆಯ ಹಾರರ್‌– ಕಾಮಿಡಿ ಚಿತ್ರದಲ್ಲಿ ನಟಿಸಲಿದ್ದಾರೆ.

ಸಂಧ್ಯಾ ಮೋಹನ್‌ ನಿರ್ದೇಶನದ ‘ಸೆಂಟ್ರಲ್‌ ಜೈಲ್‌ ಪ್ರೇತಂ’ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ

ಈ ಚಿತ್ರವನ್ನು ಇಂಡಿಯನ್‌ ಆರ್ಟ್ಸ್‌ ಸ್ಟುಡಿಯೊ ನಿರ್ಮಾಣ ಮಾಡಲಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಲಿವುಡ್‌ ಹಾಗೂ ಮಾಲಿವುಡ್‌ನ ಪ್ರಮುಖ ನಟ– ನಟಿಯರು ಅಭಿನಯಿಸಲಿದ್ದಾರೆ. ಆದರೆ ಯಾರ‍್ಯಾರು ಎಂಬ ಬಗ್ಗೆ ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿಲ್ಲ. ಈ ಚಿತ್ರದ ಚಿತ್ರಕತೆ ಹಾಗೂ ಸಂಭಾಷಣೆಯನ್ನು ಸಂಧ್ಯಾ ಮೋಹನ್‌ ಅವರೇ ಬರೆದಿದ್ದಾರೆ.

Post Comments (+)