ಮಂಗಳವಾರ, ಜನವರಿ 26, 2021
15 °C

ಖ್ಯಾತ ತಮಿಳು ನಿರ್ಮಾಪಕ ಕೆ. ಬಾಲು ವಿಧಿವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳಿನ ಖ್ಯಾತ ಸಿನಿಮಾ ನಿರ್ಮಾಪಕ ಕೆ. ಬಾಲು ವಿಧಿವಶರಾಗಿದ್ದಾರೆ. ಪ್ರಭು ಹಾಗೂ ಖುಷ್ಬೂ ನಟನೆಯ ‘ಚಿನ್ನ ತಂಬಿ’ ಸಿನಿಮಾಕ್ಕೆ ಇವರು ನಿರ್ಮಾಪಕರಾಗಿದ್ದರು. ಕೆಪಿ ಫಿಲ್ಮ್ಸ್‌ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾ ತುಂಬಾನೇ ಹೆಸರು ಮಾಡಿತ್ತು. ಇವರ ಸಾವಿಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಟ ಹಾಗೂ ರಾಜಕಾರಣಿ ಆರ್‌. ಶರತ್‌ ಕುಮಾರ್‌ ‘ಬಾಲು ಅವರ ಆಕಸ್ಮಿಕ ಅಗಲಿಕೆ ನನಗೆ ಶಾಕ್ ನೀಡಿದೆ. ಸಿನಿಮಾ ಕ್ಷೇತ್ರಕ್ಕೆ ಇವರು ನೀಡಿದ ಸೇವೆ ಅಗಣ್ಯ. ಅವರು ಬಹಳ ಬೇಗ ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಸ್ನೇಹಿತರು ಹಾಗೂ ಆತ್ಮೀಯ ಬಳಗಕ್ಕೆ ಅವರ ಸಾವಿನ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

 

 

 

ನಿರ್ಮಾಪಕ ವೆಂಕಟೇಶ್ ಪ್ರಭು ಬಾಲು ಅವರ ಫೋಟೊವನ್ನು ಹಂಚಿಕೊಂಡು ‘ಅವರು ಒಬ್ಬ ಅದ್ಭುತ ವ್ಯಕ್ತಿ, ಮಿಸ್‌ ಯು ಅಂಕಲ್‌! ನಿಮ್ಮ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು