ಮಂಗಳವಾರ, ಆಗಸ್ಟ್ 3, 2021
21 °C

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳಿನ ಹಾಸ್ಯ ನಟ ಯೋಗಿ ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಗೆಳತಿ ಮಂಜು ಭಾರ್ಗವಿ ಅವರನ್ನು ಬುಧವಾರ ವಿವಾಹವಾಗಿದ್ದಾರೆ.

ಇಲ್ಲಿನ ಮುರುಗನ್‌ ದೇವಸ್ಥಾನದಲ್ಲಿ ಯೋಗಿ ಬಾಬು ಸರಳವಾಗಿ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಯೋಗಿ ಬಾಬು ಕುಟುಂಬದವರು ಮತ್ತು ಆಪ್ತ ಗೆಳೆಯರು ಮಾತ್ರ ಹಾಜರಿದ್ದರು. ಮಾರ್ಚ್‌ ತಿಂಗಳಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಮಾಡಿ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಯೋಗಿ ಬಾಬು ಕುಟುಂಬದ ಮೂಲಗಳು ತಿಳಿಸಿವೆ.

ಸದ್ಯದ ತಮಿಳು ಚಿತ್ರರಂಗದಲ್ಲಿ ಯೋಗಿ ಬೇಡಿಕೆಯ ನಟರಾಗಿದ್ದಾರೆ. ಕಳೆದ ವರ್ಷ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಧರ್ಮಪ್ರಭು ಸಿನಿಮಾದಲ್ಲಿ ಯೋಗಿ ಬಾಬು ನಾಯಕ ನಟನಾಗಿ ಅಭಿನಯಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತು. ನಾಯಕನಾಗಿರುವ ಗೂರ್ಖಾ ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ತಲೈವಾ ರಜನಿಕಾಂತ್ ಅಭಿನಯದ ದರ್ಬಾರ್‌ ಸಿನಿಮಾದಲ್ಲಿ ಯೋಗಿ ಬಾಬು ನಟಸಿದ್ದರು. ತಮ್ಮ ಹಾಸ್ಯ ಪಾತ್ರದ ಮೂಲಕ ಜನರನ್ನು ರಂಜಿಸಿದ್ದರು. 

ಈ ವರ್ಷಾಂತ್ಯದೊಳಗೆ ಯೋಗಿ ಬಾಬು ಇನ್ನು 20 ಚಿತ್ರಗಳಲ್ಲಿ ನಟಿಸಲಿದ್ದಾರೆ. ಇವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಕಾಕ್‌ಟೆಲ್‌ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರದ ಪೋಸ್ಟರ್‌ನಲ್ಲಿ ಅವರು ‘ಮುರುಗನ್‌‘ ದೇವರ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಯೋಗಿ ವಿರುದ್ಧ ದೂರು ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು