ಕೊರೊನಾ ಸೋಂಕಿನ ಕಾರಣದಿಂದ ಜಗತ್ತೇ ನಲುಗುತ್ತಿದೆ. ಫೆಬ್ರುವರಿ ತಿಂಗಳಿಂದ ಆರಂಭವಾದ ಕೊರೊನಾ ಬಿಕ್ಕಟ್ಟು ಇನ್ನು ಅಂತ್ಯ ಕಾಣುತ್ತಿಲ್ಲ. ಇದಕ್ಕೆ ಚಿತ್ರೋದ್ಯಮವು ಹೊರತಾಗಿಲ್ಲ. ಹೆಚ್ಚಿನ ಸಿನಿಮಾಗಳು ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರಕತೆಯನ್ನೇ ಬದಲಾಯಿಸುತ್ತಿವೆ ಸಿನಿರಂಗ. ಇದಕ್ಕೆ ಮಹೇಶ್ ಬಾಬು ಅಭಿಯನದ ‘ಸರ್ಕಾರು ವಾರಿ ಪಾಟ’ ಸಿನಿಮಾವೂ ಹೊರತಾಗಿಲ್ಲ.

ಇತ್ತೀಚೆಗೆ ಈ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಪೋಸ್ಟರ್ ಬಿಡುಗಡೆಯಾದ ಕ್ಷಣದಿಂದ ಸಿನಿಪ್ರೇಮಿಗಳು ಮಹೇಶ್ ಕತ್ತಿನ ಟ್ಯಾಟು ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೇ ಈ ಟ್ಯಾಟು ಅನೇಕರಲ್ಲಿ ಕುತೂಹಲ ಹುಟ್ಟು ಹಾಕಿದೆ.

ಹೌದು, ಪೋಸ್ಟರ್ನಲ್ಲಿ ತಟ್ಟನೆ ಕಣ್ಣಿಗೆ ಬೀಳುವುದು ಮಹೇಶ್ ಕತ್ತಿನ ರೂಪಾಯಿ ಚಿಹ್ನೆಯ ಟ್ಯಾಟು. ಏನಿದು ರೂಪಾಯಿ ಚಿಹ್ನೆ? ಎಂಬ ಕುತೂಹಲ ಮೂಡುವುದು ಸಹಜ. ಆದರೆ ಈ ಟ್ಯಾಟುವಿನ ಹಿಂದೆ ಕತೆಯೊಂದಿದೆ.

ಈ ಚಿತ್ರದ ಆರಂಭದಲ್ಲಿ ಆ ಜಾಗದಲ್ಲಿ ಡಾಲರ್ ಟ್ಯಾಟು ಹಾಕಿಸಲು ಚಿಂತಿಸಲಾಗಿತ್ತು. ಚಿತ್ರದ ಸ್ಕ್ರಿಪ್ಟ್ ಪ್ರಕಾರ ಈ ಸಿನಿಮಾದ ಶೂಟಿಂಗ್ ಅಮೆರಿಕದಲ್ಲಿ ಆರಂಭವಾಗಿಬೇಕಿತ್ತು. ಆದರೆ ಲಾಕ್ಡೌನ್ನ ಅನಿಶ್ಚಿತತೆಯ ಕಾರಣದಿಂದ ಹೊರದೇಶಗಳಲ್ಲಿ ಶೂಟಿಂಗ್ಗೆ ಅನುಮತಿ ಸಿಗುವುದು ಅನುಮಾನವಾಗಿದೆ. ಆ ಕಾರಣಕ್ಕೆ ಸಂಪೂರ್ಣ ಚಿತ್ರಕತೆಯನ್ನು ಬದಲಾಯಿಸಿ ಭಾರತದಲ್ಲೇ ಶೂಟಿಂಗ್ ಮಾಡಲು ನಿರ್ಧರಿಸಿದೆ ಚಿತ್ರತಂಡ.

ಒಂದು ವೇಳೆ ಸಿನಿಮಾದ ಕೆಲವು ಭಾಗ ಈಗಾಗಲೇ ಅಮೆರಿಕದಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದರೆ ಚಿತ್ರತಂಡ ತುಂಬಾ ಸಮಸ್ಯೆ ಎದುರಿಸುತ್ತಿತ್ತು. ಆದರೆ ಇನ್ನೂ ಚಿತ್ರದ ಶೂಟಿಂಗ್ ಆರಂಭವಾಗದ ಕಾರಣ ಸಿನಿಮಾದ ಸಂಪೂರ್ಣ ಕತೆಯನ್ನು ಬದಲಾಯಿಸಿ ಭಾರತದಲ್ಲೇ ಶೂಟಿಂಗ್ ನಡೆಸಲು ಚಿಂತಿಸಲಾಗಿದೆ. ಜೊತೆಗೆಪರಿಸ್ಥಿತಿಗೆ ತಕ್ಕಂತೆ ಕತೆಯನ್ನು ಬದಲಾಯಿಸುವುದು ಅನಿವಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.