ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮ ಕೀರ್ತಿರಾಜ್ ಈಗ ‘ಟೆನೆಂಟ್’

Published 6 ಆಗಸ್ಟ್ 2024, 14:17 IST
Last Updated 6 ಆಗಸ್ಟ್ 2024, 14:17 IST
ಅಕ್ಷರ ಗಾತ್ರ

ಧರ್ಮ ಕೀರ್ತಿರಾಜ್, ತಿಲಕ್ ರಾಜ್ ಅಭಿನಯದ ‘ಟೆನೆಂಟ್’ ಚಿತ್ರದ ಫಸ್ಟ್‌ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿಎಫ್‌ಎಕ್ಸ್‌ ತಂತ್ರಜ್ಞರಾಗಿರುವ ಶ್ರೀಧರ್ ಶಾಸ್ತ್ರೀ ಈ ಚಿತ್ರಕ್ಕೆ ಕಥೆ ಬರೆದು, ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್‌ ಅಡಿಯಲ್ಲಿ ನಾಗರಾಜ್ ಟಿ ಬಂಡವಾಳ ಹೂಡಿದ್ದಾರೆ.

‘ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಈಗಾಗಲೇ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೆಂಗಳೂರಿನ ಮನೆಯೊಂದರಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲಿಯೇ ಟೀಸರ್ ಬಿಡುಗಡೆ ಮಾಡುತ್ತೇವೆ’ ಎಂದಿದ್ದಾರೆ ಚಿತ್ರದ ನಿರ್ದೇಶಕರು. 

ಸೋನುಗೌಡ, ರಾಕೇಶ್ ಮಯ್ಯ ಹಾಗೂ ಉಗ್ರಂ ಮಂಜು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಗಿರೀಶ್ ಹೋತೂರ್ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಮನೋಹರ್ ಜೋಷಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT