ಶುಕ್ರವಾರ, ಮಾರ್ಚ್ 31, 2023
22 °C
ತಾರಸಿ ತೋಟದಲ್ಲಿ ಸಮಂತಾ

ನಗರದ ರೈತ ಮಹಿಳೆ ಸಮಂತಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಮಂತಾ ಅಕ್ಕಿನೇನಿ ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಅಕ್ಕಿನೇನಿ ಕುಟುಂಬದ ಸೊಸೆಯಾದ ಮೇಲೂ ಇವರು ನಟನೆಗೆ ಬ್ರೇಕ್ ಹಾಕಿಲ್ಲ. ನಟನೆಯ ಮೇಲೆ ಅತಿಯಾದ ಒಲವು ಹೊಂದಿರುವ ಸಮಂತಾ ‘ಏ ಮಾಯ ಚೇಸಾವೆ’ ಸಿನಿಮಾದ ಮೂಲಕ ನಟಿಸಲು ಆರಂಭಿಸುತ್ತಾರೆ. 

ಸಿನಿರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸಮಂತಾಗೆ ‘ನಿಮ್ಮ ಹವ್ಯಾಸವೇನು?’ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಲೇ ಇರುತ್ತಿದ್ದರು. ಆದರೆ ಸಮಂತಾ ಆ ಪ್ರಶ್ನೆಗೆ ಎಂದಿಗೂ ಸರಿಯಾದ ಉತ್ತರ ನೀಡಿರಲಿಲ್ಲ. ಕೊನೆಗೂ ಈ ಸುಂದರಿ ಒಂದು ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಅದೇ ತಾರಸಿ ತೋಟ ಮಾಡುವುದು. 

ಅಕ್ಕಿನೇನಿ ಮನೆತನದ ಸೊಸೆ ಈಗ ನಗರದ ರೈತ ಮಹಿಳೆಯಾಗಿದ್ದಾರೆ. ನಗರ ಕೃಷಿ(ಅರ್ಬನ್‌ ಫಾರ್ಮಿಂಗ್‌) ಯಲ್ಲಿ ತೊಡಗಿರುವ ಸಮಂತಾ ಅದನ್ನೇ ಹವ್ಯಾಸವನ್ನಾಗಿಸಿಕೊಂಡಿದ್ದಾರೆ.

ತಮ್ಮ ತಾರಸಿ ತೋಟದ ಚಿತ್ರಗಳನ್ನು ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಸಮಂತಾ. ‘ಕೊನೆಗೂ ನನ್ನ ವೃತ್ತಿಗೆ ಸಂಬಂಧವಿಲ್ಲದ ಹೊಸ ಹವ್ಯಾಸವೊಂದನ್ನು ರೂಢಿಸಿಕೊಂಡಿದ್ದೇನೆ. ಪ್ರತಿ ಸಲ ಜನರು ನನಗೆ ನಿಮ್ಮ ಹವ್ಯಾಸವೇನು ಎಂದು ಕೇಳುವ ಪ್ರಶ್ನೆಗೆ ನಾನು ನಟಿ ಎನ್ನುತ್ತಿದ್ದೆ. ಆದರೆ ಅವರು ಅದು ನಿಮ್ಮ ವೃತ್ತಿ, ನಿಮ್ಮ ಹವ್ಯಾಸವಲ್ಲ ಎನ್ನುತ್ತಿದ್ದರು. ಈ ಪ್ರಶ್ನೆಯಿಂದ ನಾನು ಬೇಸತ್ತು ಹೋಗಿ‌ದ್ದೆ. ಈಗ ನಗರದ ರೈತ ಮಹಿಳೆ ಎಂದು ಖುಷಿಯಿಂದ ಹೇಳಬಹುದು’ ಎಂದು ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಸಮಂತಾ ಹಾಗೂ ಪತಿ ನಾಗ ಚೈತನ್ಯ ಹೈದಾರಾಬಾದ್‌ನ ಗಾಚಿಬೌಲಿಯಲ್ಲಿ ಐಷಾರಾಮಿ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದಾರೆ. ಆ ಕಟ್ಟಡ ತಾರಸಿ ಮೇಲೆ ತೋಟ ನಿರ್ಮಾಣ ಮಾಡಿರುವ ಸಮಂತಾ ಅಲ್ಲಿ ಮನೆ ಬಳಕೆಗೆ ಬೇಕಾಗುವ ತರಕಾರಿಗಳನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಆರೋಗ್ಯಕರವಾದ ಭಾರತೀಯ ರೆಸಿಪಿಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಯೋಗಾಭ್ಯಾಸ ಕೂಡ ಮಾಡುತ್ತಿದ್ದಾರೆ. ಒಟ್ಟಾರೆ ಲಾಕ್‌ಡೌನ್‌ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಸಮಂತಾ.

‘ಓ ಬೇಬಿ’ ಹಾಗೂ ‘ಜಾನು’ ಸಿನಿಮಾಕ್ಕಾಗಿ ಸತತ ಶೂಟಿಂಗ್‌ನಲ್ಲಿ ತೊಡಗಿದ್ದ ಈ ನಟಿ ಬ್ರೇಕ್‌ ಬಯಸುತ್ತಿದ್ದರು. ಈ ಎರಡೂ ಸಿನಿಮಾಗಳು ಬಿಡುಗಡೆಯಾದ ಕೆಲ ತಿಂಗಳುಗಳಲ್ಲೇ ಲಾಕ್‌ಡೌನ್ ಘೋಷಣೆಯಾಗಿತ್ತು. ಆ ಸಮಯದಲ್ಲಿ ತಾರಸಿ ತೋಟ ಮಾಡುವ ಮೂಲಕ ಅದನ್ನೇ ಹವ್ಯಾಸವನ್ನಾಗಿಸಿಕೊಂಡಿದ್ದಾರೆ ಸಮಂತಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು