‘ಬಾಹುಬಲಿ’ ಸರಣಿ ಸಿನಿಮಾಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟ ಪ್ರಭಾಸ್ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿರುವುದು ಸುಳ್ಳೇನಲ್ಲ. ‘ಸಾಹೊ’ ಚಿತ್ರದ ಬಳಿಕ ಅವರು ರಾಧಾ ಕೃಷ್ಣಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್’ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಅವರಿಗೆ ಕನ್ನಡತಿ ಪೂಜಾ ಹೆಗ್ಡೆ ಜೋಡಿ. ಈ ಚಿತ್ರದ ಬಳಿಕ ಪ್ರಭಾಸ್ ‘ಮಹಾನಟಿ’ ಚಿತ್ರದ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ.

ವೈಜಯಂತಿ ಮೂವೀಸ್ ಬಂಡವಾಳ ಹೂಡಲಿರುವ ಇದರಲ್ಲಿ ಪ್ರಭಾಸ್‌ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿ. ಈ ಬಗ್ಗೆ ಅಧಿಕೃತವಾಗಿ ಚಿತ್ರದ ನಿರ್ಮಾಣ ಸಂಸ್ಥೆಯೇ ಘೋಷಿಸಿದೆ. ಈ ಮೊದಲು ಡಿಪ್ಪಿಯ ಸಂಭಾವನೆ ಚಿತ್ರವೊಂದಕ್ಕೆ ₹ 7ರಿಂದ 8 ಕೋಟಿ ಇತ್ತು. ಆದರೆ, ತೆಲುಗಿನ ಈ ಚಿತ್ರದಲ್ಲಿನ ನಟನೆಗಾಗಿ ಆಕೆ ₹ 20 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾಳೆ ಎಂಬುದು ಟಾಲಿವುಡ್ ಅಂಗಳದ ಮಾಹಿತಿ. ದಕ್ಷಿಣ ಭಾರತದಲ್ಲಿಯೇ ಹಲವು ನಟೀಮಣಿಯರು ಇದ್ದರೂ ನಾಗ್ ಅಶ್ವಿನ್ ಅವರು ದೀಪಿಕಾಳ ಮೊರೆ ಹೋಗಿದ್ದು ಏಕೆ? ಎನ್ನುವುದು ಹಲವರ ಪ್ರಶ್ನೆ. ಇದಕ್ಕೆ ಅಸಲಿ ಕಾರಣ ಈಗ ಬಹಿರಂಗಗೊಂಡಿದೆ.

ದೀಪಿಕಾ ಬಿಟೌನ್‌ನ ‘ಸ್ಟಾರ್ ನಟಿ’ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆ ನಟಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿರುವುದೇ ಇದಕ್ಕೆ ನಿದರ್ಶನ. ಮತ್ತೊಂದೆಡೆ ಆಕೆಗೆ ನೃತ್ಯದಲ್ಲಿ ಸಾಕಷ್ಟು ಪರಿಣತಿ ಇದೆ. ‘ಬಾಜಿರಾವ್ ಮಸ್ತಾನಿ’ ಮತ್ತು ‘ಪದ್ಮಾವತ್’ ಸಿನಿಮಾಗಳಲ್ಲಿನ ಆಕೆಯ ನೃತ್ಯವನ್ನು ಯಾರೊಬ್ಬರು ಮರೆಯಲು ಸಾಧ್ಯವೇ?

ನಾಗ್ ಅಶ್ವಿನ್ ನಿರ್ದೇಶಿಸುವ ಹೊಸ ಚಿತ್ರದಲ್ಲಿನ ಹೀರೊಯಿನ್ ಪಾತ್ರ ನೃತ್ಯ ಆಧರಿತವಾಗಿದೆ. ನೃತ್ಯಕ್ಕೆ ಹೆಚ್ಚು ಸ್ಕೋಪ್ ಇದೆಯಂತೆ. ಡಿಪ್ಪಿ ಮಾತ್ರವೇ ನೃತ್ಯದ ಮೂಲಕ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಹಾಗಾಗಿಯೇ, ದೀಪಿಕಾ ಇದಕ್ಕೆ ಸೂಕ್ತ ಹೀರೊಯಿನ್ ಎಂದು ನಿರ್ಧರಿಸಿ ಆಕೆಯನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರಂತೆ.

ಪ್ರಸ್ತುತ ಕೋವಿಡ್–19 ಪರಿಣಾಮ ಟಾಲಿವುಡ್‌ನಲ್ಲೂ ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹಾಗಾಗಿ, ಈ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದು ನಿಖರವಾಗಿ ಗೊತ್ತಿಲ್ಲ. ಕೊರೊನಾ ಸೋಂಕು ಕಡಿಮೆಯಾದರೆ ವರ್ಷಾಂತ್ಯಕ್ಕೆ ಶೂಟಿಂಗ್ ಆರಂಭಿಸುವುದು ಚಿತ್ರತಂಡದ ಯೋಜನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.