ಇದೇ 23ಕ್ಕೆ ಶ್ರದ್ಧಾ, ರಣಬೀರ್ ಕಪೂರ್ ಚಿತ್ರದ ಟ್ರೈಲರ್ ಬಿಡುಗಡೆ

ಮುಂಬೈ: ಬಾಲಿವುಡ್‌ನಲ್ಲಿ ಈಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಬಾಲಿವುಡ್‌ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಶ್ರದ್ಧಾ ಕಪೂರ್ ಹಾಗೂ ರಣಬೀರ್ ಕಪೂರ್ ಅಭಿನಯದ ’ತು ಜೂಠಿ ಮೇ ಮಕ್ಕರ್’ ಚಿತ್ರದ ಟ್ರೇಲರ್ ಇದೇ 23ರಂದು ಬಿಡುಗಡೆ ಆಗಲಿದೆ.
Objects in the picture are not as close as they appear...😉#TuJhoothiMainMakkaar trailer out on 23rd Jan at 1 PM.#RanbirKapoor @luv_ranjan#AnshulSharma @modyrahulmody @gargankur #BhushanKumar @LuvFilms @TSeries pic.twitter.com/Sn4klu8heF
— Shraddha (@ShraddhaKapoor) January 20, 2023
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ನಟಿ ಶ್ರದ್ಧಾ ಕಪೂರ್ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿನ ವಸ್ತುಗಳು, ಅಲ್ಲಿ ಕಾಣುವಷ್ಟು ಸನಿಹವಲ್ಲ ಎಂಬ ಅಡಿಬರಹವನ್ನು ಉಲ್ಲೇಖಿಸಿ, ಎಮೋಜಿ ಕೊಟ್ಟಿದ್ದಾರೆ.
ಮುಂಬೈನಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಿ 3 ನಿಮಿಷ 26 ಸೆಕೆಂಡ್ ಇರುವ ’ತು ಜೂಥಿ ಮೈನ್ ಮಕ್ಕರ್’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತದೆ. ಈ ಸಿನಿಮಾವು ರೋಮ್ಯಾಂಟಿಕ್– ಹಾಸ್ಯ ಕಥಾ ಹಂದಾರವನ್ನು ಒಳಗೊಂಡಿದೆ. ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ.
ಈ ಚಿತ್ರದ ಟ್ಯಾಗ್‌ಗಳನ್ನು ಪಠಾಣ್ ಸಿನಿಮಾ ಲಿಂಕ್‌ಗಳಿಗೆ ಲಗತ್ತಿಸಲಾಗಿದೆ. ಜಾಗತಿಕವಾಗಿ ಜನರನ್ನು ತಲುಪುವ ಪ್ರಯತ್ನವಾಗಿದೆ. ಚಿತ್ರದಲ್ಲಿ ಪ್ರೀತಮ್ ಮತ್ತು ಭೂಷಣ್ ಕುಮಾರ್ ಹಾಡುಗಳನ್ನು ಸಂಯೋಜಿಸಿದ್ದು, ಲವ್ ರಂಜನ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ.
ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಲಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್
ಚಿತ್ರವಾಗಿದ್ದು, ಎಲ್ಲಾ ವರ್ಗದ ಜನರು ನೋಡಬಹುದಾಗಿದೆ ಎನ್ನುತ್ತದೆ ಚಿತ್ರತಂಡ .
ಕಳೆದ ವರ್ಷ ರಣಬೀರ್ ಕಪೂರ್, ನಟಿ ಅಲಿಯಾ ಭಟ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಹೆಣ್ಣು ಮಗು ಆಗಿದೆ.
ಇದನ್ನು ಓದಿ: ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.