ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಕಥೆಗಳ ಗುಚ್ಛದಲ್ಲಿ ಗ್ರೀಷ್ಮಾ ನಟನೆ

Last Updated 26 ಮೇ 2020, 19:30 IST
ಅಕ್ಷರ ಗಾತ್ರ

ಕಿಶೋರ್ ಮೂಡಬಿದ್ರೆ ನಿರ್ದೇಶನದ, ವಿಜಯ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಸಿನಿಮಾ ವೀಕ್ಷಿಸಿದವರು ಗ್ರೀಷ್ಮಾ ಶ್ರೀಧರ್ ಎಂಬ ಹೊಸ ನಟಿಯನ್ನು ಗುರುತಿಸಿರುತ್ತಾರೆ. ಗ್ರೀಷ್ಮಾ ಅವರು ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರದಲ್ಲಿ ಕೂಡ ಚಿಕ್ಕದೊಂದು ಪಾತ್ರವನ್ನು ನಿಭಾಯಿಸಿದ್ದರು.

‘ಮಾಲ್ಗುಡಿ ಡೇಸ್’ ನಂತರ ಗ್ರೀಷ್ಮಾ ಅವರಿಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿದೆ. ‘ಕೇಶವಮೂರ್ತಿ ಎನ್ನುವವರು ನಿರ್ದೇಶಿಸಿರುವ ಒಂದು ಸಿನಿಮಾದ ಚಿತ್ರೀಕರಣದ ಕೆಲಸಗಳು ಪೂರ್ಣಗೊಂಡಿವೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆದರೆ, ಇದರ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ’ ಎಂದು ತಿಳಿಸಿದರು ಗ್ರೀಷ್ಮಾ.

‘ನಮ್ಮ ಜವಾಬ್ದಾರಿ ಎಂಬ ತಾತ್ಕಾಲಿಕ ಶೀರ್ಷಿಕೆಯನ್ನು ಸಿನಿತಂಡ ಇಟ್ಟುಕೊಂಡಿದೆ. ಇದು ಮೂರು ಕಥೆಗಳ ಗುಚ್ಛದಂತೆ ಇರುವ ಸಿನಿಮಾ. ಮೂರು ಕಥೆಗಳು ಸೇರಿ ಒಂದು ಕಥೆಯಾಗುವ ಸಿನಿಮಾ ಇದು. ನಾನು ಒಂದು ಕಥೆಯ ನಾಯಕಿಯ ಪಾತ್ರ ನಿಭಾಯಿಸಿರುವೆ. ಈ ಚಿತ್ರವು ತೆರೆಗೆ ಬರಲು ಸಜ್ಜಾಗುತ್ತಿದೆ’ ಎಂದು ತಿಳಿಸಿದರು.‌

ಗ್ರೀಷ್ಮಾ ಅವರದ್ದು ಇದರಲ್ಲಿ ಆಧುನಿಕ ಕಾಲದ ಯುವತಿಯ ಪಾತ್ರ. ಈಗಿನ ಕಾಲದಲ್ಲಿ ಸಂಬಂಧಗಳು ಹೇಗಿರಬಹುದು ಎಂಬುದನ್ನು ಈ ಚಿತ್ರದ ಕಥೆಯು ಹೇಳುತ್ತದೆಯಂತೆ. ವಿನಯ್ ಶಾಸ್ತ್ರಿ ನಿರ್ದೇಶನದ ಒಂದು ಸಿನಿಮಾದಲ್ಲಿ ಕೂಡ ಗ್ರೀಷ್ಮಾ ಮುಖ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ.ಇದರಲ್ಲಿ ರಾಜೇಶ್ ನಟರಂಗ ಅವರೂ ಅಭಿನಯಿಸುತ್ತಿದ್ದಾರೆ. ‘ನಿರ್ದೇಶಕರು ಹೇಳುವವರೆಗೂ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾರೆ’ ಎಂಬ ನಿಲುವು ತಾಳಿದ್ದಾರೆ ಗ್ರೀಷ್ಮಾ.

ಗ್ರೀಷ್ಮಾ ಅವರು ನಾಯಕಿಯಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ‘ಮಾಲ್ಗುಡಿ ಡೇಸ್’. ‘ನಾಯಕಿಯ ಪಾತ್ರ ಸಿಕ್ಕಿದ್ದ ಕಾರಣ, ನನ್ನ ಮೇಲಿನ ಜವಾಬ್ದಾರಿಗಳು ಹೆಚ್ಚಿದ್ದವು. ಅವುಗಳನ್ನು ಹೇಗೆ ನಿಭಾಯಿಸುವೆನೋ ಎಂಬ ಆತಂಕ ಇತ್ತು. ಆದರೆ, ಸಿನಿಮಾ ಉದ್ಯಮದವರು ಸೇರಿದಂತೆ ಬಹಳಷ್ಟು ಜನ ನಾನು ಪಾತ್ರ ನಿಭಾಯಿಸಿದ ರೀತಿಯನ್ನು ಮೆಚ್ಚಿಕೊಂಡರು, ಅದನ್ನು ನನಗೆ ತಿಳಿಸಿದರು. ಆ ಮೂಲಕ ನನ್ನಲ್ಲಿದ್ದ ಆತಂಕ ದೂರ ಮಾಡಿದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT