ಬೆಂಗಳೂರು: ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿರುವ ‘ಟೈಗರ್ 3’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ತೀವ್ರ ಕುತೂಹಲ ಹುಟ್ಟುವಂತೆ ಮಾಡಿದೆ.

ಅಲ್ಲದೇ ಇದೇ ವೇಳೆ ಚಿತ್ರ ಬಿಡುಗಡೆ ದಿನಾಂಕವನ್ನು ಸಲ್ಮಾನ್ ಘೋಷಿಸಿದ್ದು ಏಪ್ರಿಲ್ 21 ಕ್ಕೆ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಟೀಸರ್‌ನಲ್ಲಿ ಕತ್ರಿನಾ ಕೈಪ್ ಹಾಗು ಸಲ್ಮಾನ್ ಖಾನ್ ಎಂಟ್ರಿ ವಿಶೇಷವಾಗಿ ಮೂಡಿಬಂದಿದ್ದು, ನಾವು ‘ನಿಮ್ಮ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುತ್ತೇವೆ' ಎಂದು ಈ ತಾರಾ ಜೋಡಿ ಪಂಚಿಂಗ್ ಡೈಲಾಗ್ ಕೊಟ್ಟಿದ್ದಾರೆ.

ಈ ಹಿಂದೆ ಇದೇ ಜೋಡಿ ‘ಏಕ್ತಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳಲ್ಲಿ ಮೋಡಿ ಮಾಡಿತ್ತು. ಸಲ್ಮಾನ್ ಖಾನ್ ಇಲ್ಲಿ ಭಾರತದ ಗೂಡಚರ್ಯೆ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಕತ್ರಿನಾ ಪಾಕ್ ಗೂಡಚರ್ಯೆ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಟೈಗರ್ 3 ಸಿನಿಮಾವನ್ನು ಮನೀಶ್ ಶರ್ಮಾ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.